STORYMIRROR

Chinni Ramya

Romance Classics Others

4  

Chinni Ramya

Romance Classics Others

ಎಂದು ಬರುವೆ ನೀ ನನಗಾಗಿ

ಎಂದು ಬರುವೆ ನೀ ನನಗಾಗಿ

1 min
221

ನಿನ್ನ ಕೋಮಲವಾದ ವದನದಲ್ಲಿ,

ಕಾಡುತಿರುವ ಕಂಗಳಲಿ ಸೋತಿಹೆ ನಾನು 

ಇದು ಪ್ರೀತಿಯ ಆಟವ, ಇಲ್ಲಾ ನಿನ್ನ

ಮೋಹಕದ ಬಲೆಯೇ?


ಈ ಪ್ರೀತಿಯಾ ಹೇಳದೆ ಇರಲಾಗದು.

ಮಾತಿನಲ್ಲಿ ಹೇಳಲಾಗದ ಪ್ರೀತಿ ಇದು,

ಹೇಳಿದರು ಅರ್ಥವಾಗದ ಭಾಷೆ ಇದು.


ಹೇಗೆ ಹೇಳಲಿ ನಾನು, ನಿನ್ನ ಪ್ರೀತಿಯ

ಅಮಲಲ್ಲಿ ತೆಲುತ್ತಿರುವೆ ನಾನು,

ಬಂದೊಮ್ಮೆ ಬಿಗಿದಪ್ಪಿ ಮುದ್ದಾಡಬಾರದೆ?


ನಿನ್ನ ಸನಿಹ ಬಯಸುತ್ತಿದೆ ನನ್ನ ಮನ 

ನಿನ್ನ ಬಿಸಿ ಉಸಿರಲ್ಲಿ ಕರಗುವ

ಬಯಕೆಯಾಗಿದೆ.


ನಿನ್ನ ಬೆಚ್ಚಗಿನ ಅಪ್ಪುಗೆಯಲ್ಲಿ

ನನ್ನ ನಾ ಮರೆಯುವ ಆಸೆಯಾಗಿದೆ 

ಎಂದು ಬರವೇ ನೀ ನನಗಾಗಿ.


"ಹೇ ಹೃದಯವಾಸಿ''

"ಮುದ್ದು ಗೊಲ್ಲನ ಪ್ರೀತಿಯ ರಾಧೆ"



Rate this content
Log in

Similar kannada poem from Romance