ನೀನು
ನೀನು
ಮನಸಲ್ಲಿ ತುಂಬಿರುವೆ ನೀನು
ಕನಸಲ್ಲಿಯು ಬಂದಿರುವೆ ನೀನು
ನನ್ನಲಿಯು ಹರಿದಿರುವೆ ನೀನು
ಎಲ್ಲೆಲ್ಲಿಯೂ ಕಾಣುತಿರುವೆ ನೀನು!!
ಸೂರ್ಯನ ಕಿರಣವು ನೀನು
ಹೊಳೆವ ಹೊಂಗಿರಣವು ನೀನು
ವಜ್ರದಂತೆ ಮಿನುಗುತಿರುವೆ ನೀನು
ಚುಕ್ಕಿ ಚಂದ್ರಮ ತಾರೆಯು ನೀನು!!
ಶಶಿಯ ತಂಗಾಳಿಯು ನೀನು
ಮಂದಾರ ಪುಷ್ಪವು ನೀನು
ಇಂದಿರನಂತೆ ನಾಚುವ ನೀನು
ಸೌಂದರ್ಯದ ಸಾಗರ ನೀನು!!
ಸ್ನೇಹದ ಗುಡಿಯು ನೀನು
ಸುಂದರ ಶಿಲ್ಪವು ನೀನು
ಪ್ರಕೃತಿಯ ಒಲವು ನೀನು
ಸೊಗಸಾದ ಕಡಲು ನೀನು!!
ಹಸಿರಿನ ಸೊಬಗು ನೀನು
ಕಾವ್ಯ ಕನ್ನಿಕೆಯು ನೀನು
ಸುರಿವ ಮಳೆಯು ನೀನು
ಬೀಸುವ ಗಾಳಿಯು ನೀನು!!
ಉಲ್ಲಾಸದ ಉಸಿರು ನೀನು
ಹೃದಯದ ಅರಸಿ ನೀನು
ನಾಟ್ಯ ಮಯೂರಿ ನೀನು
ಮೃದುವಾದ ಸ್ಪರ್ಶ ನೀನು!!
ಉತ್ಸಾಹದ ಹೊನಲು ನೀನು
ಶೃಂಗಾರ ಲಾಲಿತ್ಯ ನೀನು
ನಿಸರ್ಗದ ರಮಣಿ ನೀನು
ಮನದ ಹರುಷ ನೀನು!!