ಒಲವ ಪಯಣ
ಒಲವ ಪಯಣ
ಹೊಸ ಕನಸುಗಳ ಚಿಗುರಿಸಿದ ಹನಿಯು
ಈ ಒಲವ ಪಯಣದಲ್ಲಿ ನಿನ್ನನ್ನು ನೀಡಿದೆ
ಹರೆಯ ಮಾಗುವ ಮುನ್ನ ಜೊತೆಯಾಗಿ
ಹೆಜ್ಜೆ ಇಡುವ ಬಯಕೆ ಮತ್ತೊಮ್ಮೆ ಮೂಡಿದೆ
ಕಚಗುಳಿ ಇಟ್ಟ ಎದೆಯ ಬಯಕೆಯಿಲ್ಲಿ
ಬದುಕಿನ ಅನುಭಾವಕೆ ಗರಿಗೆದರಿದೆ
ನೀನೊಮ್ಮೆ ಬಂದುಬಿಡು ಗೆಳತಿ
ನನ್ನೆಲ್ಲ ಜೀವನ ನಿನಗಾಗಿಯೇ ಕಾದಿದೆ

