STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಮಾಗಿಯ ಕನಸು

ಮಾಗಿಯ ಕನಸು

1 min
419


ಮುದ್ಮುಂಜಾನೆಯ ಕನಸಲ್ಲಿ

ಮುಗುಳ್ನಗೆಯ ಛಾಪು

ಮಧುರಭಾವನೆಗಳ ಒನಪು

ಮೆರುಗುಬಣ್ಣ ತಳೆದ ಕದಪು

ಮನದಂಗಳದಲಿ ಹರಿದ ಸೊಂಪು

ಎಲ್ಲ ದಕ್ಕೂ ಕಾರಣ ನಿನ್ನದೇ ನೆನಪು.


ಮಾಸದ ನೆನಪಿನ ತುಣುಕುಗಳ ಹಾವಳಿ

ಮೂಡಿಸುವವು ನೂರುತರದ ಚಿತ್ರಾವಳಿ

ಮನದ ತುಂಬಾ ನಿನ್ನದೇ ಪ್ರೀತಿ ಪುತ್ತಳಿ

ಮಗ್ಗುಲಲ್ಲಿ ಕುಳಿತು ಲಲ್ಲೆಗರೆವ ಅಂಜಲಿ

ಮಲ್ಲಿಗೆಯ ಕಂಪು ಮೈದುಂಬಿ ಅರಳಿ

ಎಲ್ಲದಕ್ಕೂ ಕಾರಣ ನಿನ್ನದೇ ಬಳುವಳಿ.


ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು

ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು

ಮೀನಿನಂದದಿ ಚಂದವಾಡುತ್ತ ನಲಿದು

ಮಧುಮಾಸಚಂದ್ರಮ ನಮದೇ ಎಂದು

ಮೆಲ್ಲನುಸುರಿದ ನಿನ್ನ ನುಡಿಗೆ ಲಜ್ಜೆಯದು

ಮರೆಯಾಗಿದೆ ತಂತಾನೆ ಜೇನುಸವಿದು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance