ಒಲವೆ ನಮ್ಮ ಜೀವಜಲವು
ಒಲವೆ ನಮ್ಮ ಜೀವಜಲವು
ನಾನು ಚೆಲುವೆ ನೀನು ಚೆಲುವ...
ಒಲವೆ ನಮ್ಮ ಜೀವಜಲವು
ಬಡವರಾದರೇನು ಇಹುದು ಪ್ರೀತಿ ಆಗರ
ಕಡೆಯತನಕ ಮುಗಿಯದಂತ ಸಪ್ತ ಸಾಗರ
ನನ್ನೊಳಿದ್ದ 'ನಾನ' ತೊರೆದು ನಿನ್ನ ಬೆರೆತೆ
ನಿನ್ನ ತನವ ತೊರೆದು ನೀನು ನನ್ನ ಅರಿತೆ
ಅನ್ನ ನೀರು ಭೂಮಿ ಕೊಟ್ಟ ಉಡುಗೊರೆ
ಗಾಳಿ ಹಸಿರು ಜಲಚರಗಳು ನಿನ್ನ ಪಹರೆ
ಕಣವೊಂದಾಗಿ ನಾನದರೊಳಿರುತಿರೆ
ಮನವಿದು ಧನ್ಯ ಅನುದಿನ ನೀ ಬಳಿಯಿರೆ
ಅರಸುವ ಗೋಜಲಿಲ್ಲವೆನಗೆ ಚಿಂತನೆಗಳಿಲ್ಲ
ಸರಸವಿರಸಗಳ ಬಾಧೆಯಿಲ್ಲ ಕನಲಿಕೆಗಳಿಲ್ಲ
ಹರಿ ನಿನ್ನ ಚರಣದೊಳು ಮನವಿಟ್ಟ ಬಳಿಕೆಲ್ಲ
ಅರಿಯದ ಆನಂದ ಸೊಗಸು ಮನಕೆಲ್ಲ
ನಂದದಾ ನಿನ್ನೊಲವು ಗಂಧ ತೀಡಿದಂತೆ ಕಂಪು
ಎಂದಿಗೂ ಬಾಡದ ನಿನ್ನರವಿಂದ ನಗೆಯ ತಂಪು
ಚಂದವೆನಗೆ ಹರಿಯೆ ನಿನ್ನತಿ ಪ್ರೀಯ ಕೊಳಲ ಇಂಪು
ಮಂದೆಗಳ ಸೆಳೆದಂತೆ ನನ್ನ ನೀ ಆವರಿಸಿದೆ ಅಂತೂ
ಗೆಳೆಯ ನಿನ್ನೊಡನೆ ಕಳೆದುಬಿಡುವೆ ಪ್ರೇಮದಿಂದ
ಅಳೆಯಲಾರೆ ನನ್ನೆದೆಯ ಮಧುರ ಭಾವನೆಗಳನು
ಮಳೆಗರೆದಿದೆ ಪುಳಕಗೊಂಡು ಒಯ್ಯಾರದಿಂದ
ಅರಳಿತೆನ್ನ ಚೇತನ ಅನಂತತೆಯೆಡೆಗೆ ಸಾಗಿದಂತೆ....