ಪುಸ್ತಕ
ಪುಸ್ತಕ
ಕಳೆದು ಹೋಗಿದೆ ಮನಸು
ಪುಸ್ತಕ ಪ್ರಪಂಚದಲ್ಲಿ
ಕೂತರೂ ನಿಂತರೂ ಅದೊಂದೇ
ಸವಿ ನೆನಪು ಮನದಲ್ಲಿ
ಲೇಖನಿ ಹಾಳೆಯ ಸ್ನೇಹ
ಬಯಸಿರುವ ಈ ಮನಸ್ಸಿಗೆ
ಯಾರ ಗೊಡವೆಯಿಲ್ಲ!
ಕಥೆ ಕವನಗಳಲ್ಲಿ ಅರಳುತ್ತಿದೆ
ಮನದ ಭಾವ..
ಹಗಲು ಇರುಳು ಕಳೆದು
ಹೋಗುತ್ತಿದೆ ನನ್ನ ಜೀವನ
ಪುಟಗಳ ಜೊತೆಯಲಿ..
ಬಿಳಿ ಹಾಳೆಯಲ್ಲಿ ನೀಲಿ
ಶಾಯಿಯ ಚಿತ್ತಾರ
ಕಂಗಳಿಗೆ ನೀಡಿವೆ ಮನ
ಮೋಹಿಸುವ ಮಂದಾರ..!
ಮನಸಿದು ಅರಳಿದೆ
ಕಂಗಳಿದು ಕನಸು ಕಂಡಿದೆ
ಅಧರಗಳು ಅರೆ ಬಿರಿದಿವೆ
ನೋವು ನಲಿವಿನ ವ್ಯಾಖ್ಯಾನ
ಇಲ್ಲೇ ಮೂಡಿವೆ..!!