🙂
🙂


ತಂಪಾದ ಕಣಿವೆಯಲಿ ಇಂಪಾಗಿ ತಂಗಾಳಿ ಬೀಸಿರಲು,
ರೆಪ್ಪೆ ಬಡಿದು ನಡೆದಿದೆ ಚುಕ್ಕಿಯೊಂದು...
ಅಕ್ಕರೆ ಅದಕೆಂದೂ ಬಯಸಿದೆ ಮನಸಂದು,
ನೋಡುತ ಕುಳಿತಿಹೆ ಅಚ್ಚರಿಯಲಿ ಭ್ರಮೆಗೊಂಡು ಅಂದು...
ಕರೆದೆ ಭೂಮಿಗಿಳಿಯಲು ನಿಹಾರಿಕೆಯ ನಗುವನು,
ಅಕ್ಕರೆಯಿದ್ದರೆ ನೀಡೆನಗೆ ಪ್ರೀತಿ ನಗದು ಎಂದು...
ಚೆಂದದಿ ನಗುವೆ ನಿನ್ನ ಕಂಡಾಗ, ಬರಲಾರೆ
ಒಪ್ಪದು ಪ್ರಕೃತಿಯೆಂದು ಹೇಳಿತು ನಾನಿಲ್ಲಿದ್ದರೆ ಚೆಂದವೆಂದು...