STORYMIRROR

Vijaya Bharathi

Abstract Classics Inspirational

4  

Vijaya Bharathi

Abstract Classics Inspirational

ಪ್ರಾರ್ಥನೆ

ಪ್ರಾರ್ಥನೆ

1 min
212


   


ನಮೋ ನಮೋ ಭಾರತೀ

ಓ ದೇವಿ ಭಾರತೀ

ಶುಭ್ರವರ್ಣೆ ಸರಸ್ವತಿ

ನೀಡೆಮಗೆ ದಿವ್ಯಮತಿ


ನಿನ್ನ ಪುಣ್ಯಭೂಮಿಯೇ

ನಮಗದೋ ತೊಟ್ಟಿಲು

ನದಿಗಳಾ ಕಲರವವೇ

ಜೋಗುಳದಾ ಲಾಲಿಯು


ನಿನ್ನ ಅಮರವಾಣಿಯೇ

ನಮಗೆ ವೇದಮಂತ್ರವು

ನಿನ್ನ ಧರ್ಮ ನುಡಿಗಳೇ

ನಮಗದೋ ಮಾನ್ಯವು


ನಿನ್ನ ಸೇವೆ ಮಾಡಲು

ಶಕ್ತಿ ಭಕ್ತಿ ಕರುಣಿಸು

ಅಜ್ಞಾನ ವನ್ನು ಕಳೆಯಿಸು

ಸುಜ್ಞಾನ ದೀಪ ಬೆಳಗಿಸು








Rate this content
Log in

Similar kannada poem from Abstract