ಸ್ವಾತಂತ್ರ್ಯ
ಸ್ವಾತಂತ್ರ್ಯ
ಬೇಕು ಸ್ವಾತಂತ್ರ್ಯ
ಜಗದ ಜೀವಿಗಳಿಗೆ
ಸ್ವೇಚ್ಚೆಯಿಲ್ಲದ
ಸ್ವಾತಂತ್ರ್ಯ ಬೇಕು
ಪಂಜರದ ಗಿಣಿಗೆ
ಸ್ವಚ್ಛ ಆಕಾಶದಲಿ
ಹಾರುವ ಸ್ವಾತಂತ್ರ್ಯ
ದೇಶದ ಪ್ರಜೆಗಳಿಗೆ
ಮಾತಾಡುವ ಸ್ವಾತಂತ್ರ್ಯ
ಪೋಷಕರಿಗೆ ಮಕ್ಕಳ
ಶಿಕ್ಷಿಸುವ ಸ್ವಾತಂತ್ರ್ಯ
ಅನ್ಯಾಯದ ಎದುರು
ನ್ಯಾಯದ ಸ್ವಾತಂತ್ರ್ಯ
ಬೇಕೇ ಬೇಕು
ಜಗದ ಜನರಿಗೆ
ತಮ್ಮ ತಮ್ಮ ಸ್ವಾತಂತ್ರ್ಯ
