STORYMIRROR

Arjun Maurya

Abstract Classics Inspirational

4  

Arjun Maurya

Abstract Classics Inspirational

ಮೌನದಲ್ಲೇ ದೇವರಾಗು

ಮೌನದಲ್ಲೇ ದೇವರಾಗು

1 min
347

ಬರಲಿ ಬಿಡು ಅವಮಾನ

ಮೌನದಲಿ ಸುಮ್ಮನಾಗು l

ದೂಷಣೆಗಳೆಷ್ಟೆ ಇರಲಿ

ಮೌನದಲ್ಲೇ ದೇವರಾಗು ll


ಚಿಂತಿಸದಿರು ಹುಟ್ಟುತನವ

ನಿನ್ನತನವೇ ಬೇರೆ ಇಹುದು l

ಆರಾಧಿಸುವ ಕಮಲವೂ

ಕೆಸರಿನೊಳಗಿನ ಕಸುವು ll


ಮುಕ್ತತನವೇ ವಿಶ್ವತನ

ಗೂಡಿನೊಳಗೇ ಸಾಯದಿರು l

ಒಮ್ಮೆ‌ರೆಕ್ಕೆ ಬಿಚ್ಚಿ ನೋಡು

ಆಗಸದ ಬಣ್ಣ ನೋಡು ll


ವಿಶ್ವವೈವಿಧ್ಯತೆಯ ನಾಡು

ಅದನರಿಯಲು ನೀನು l

ಗೂಡಬಿಟ್ಟು ಹಾರಬೇಕು

ರೆಕ್ಕೆಹರವ ಬಿಚ್ಚಬೇಕು ll


ಅರಿತುಬೆರೆತು ಹಾಡಿದಂತೆ

ಮೌನವೇ ಸಿಂಗಾರ ನೋಡು l

ಜ್ಞಾನವಂತನೊಮ್ಮೆ ನೋಡು

ಮಾತುಕತೆಯ ತೂಕ ನೋಡು ll


ಸಹಿಸಬೇಕು ಬದುಕಬೇಕು

ಎಷ್ಟೇ ನೋವು ಬಂದರೂನೂ l

ವಿಷಕಂಠನೇ ಆಗಬೇಕು

ದೇವರಾಗಿ ಬಿಡಬೇಕು ll


Rate this content
Log in

Similar kannada poem from Abstract