ಸ್ಥಿರ
ಸ್ಥಿರ
ಎಡೆಬಿಡದೆ ಸುರಿಯುತಿಹ
ಮಳೆಯ ಬಾಣಗಳಿಗೆ
ಕಲ್ಲಾಗೇ ನಿಂತುಬಿಡು
ಇಲ್ಲದಿದ್ದಲ್ಲಿ
ಕನಸುಗಳೆಲ್ಲ ನೀರಾಗಿಯೇ
ಕರಗಿಬಿಡಬಹುದು
ಬಿಸಿಲ ಬೇಗೆಗೆ
ಬಾಡಿ ಹೋಗದ
ಹೂವಾಗಲು
ಒಂದಷ್ಟು
ಹೊಸತನದಾಲೋಚನೆಗಳ
ಕ್ರೀಮುಗಳನ್ನು ಬಳಸು
ಏನಿಲ್ಲವೆಂದರೂ
ನೀನಾಗಿಯೇ
ಇದ್ದು ಬಿಡು
