Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Action Classics Inspirational

4  

Arjun Maurya

Action Classics Inspirational

ಜ್ಞಾನದ ಬಾಗಿಲು

ಜ್ಞಾನದ ಬಾಗಿಲು

1 min
303


ಅಂತರ್ ದೃಷ್ಟಿ ತೆರೆಯಿರಿ

ನಿದ್ದೆ ಸಾಕಿನ್ನು l

ಮೂಡಣದರಮನೆ ನೋಡಿರಿ

ಹೊಸವೈಚಾರಿಕತೆಯ

ಜ್ಞಾನದ ಬಾಗಿಲ ತೆರೆಯಿರಿ

ಜಡತ್ವ ಸಾಕಿನ್ನು ll


ಕನಸಿನ ಕಾಲಹರಣವದು

ಸುಖವಲ್ಲ ಅರಿಯಿರಿ l

ಮನಸಿನ ವಾಸ್ತವವದು

ಬದುಕಿನ ಸತ್ವವ ತಿಳಿಯಿರಿ ll


ಮುಂದಿನಿಂದಿನ ಮಂದೆಯ

ಹೊಗಳಿಕೆ-ತೆಗಳಿಕೆಗೆ l

ಬಿಡದಿರಿ ಬಾಯಿಯ

ಹಾಯಿರಿ ನೇರ ಹಾದಿಯ ll


ಹಾತೊರೆಯದಿರಿ ಗೌರವಕೆ

ನಿಮ್ಮ ನೀವರಿತರೆ ಸಾಕು l

ಜಗಕೆ ಬೆಳಕ ಕೊಡುವ

ದಿನಪವ ನೋಡಿದರೆ ಸಾಕು ll


ದೃಷ್ಟಿಗೆ ಬೇಕು ಸೃಷ್ಟಿಪ್ರಜ್ಞೆ

ಹೃದಯಕೆ ಸತ್ಯದೊಲುಮೆ l

ಮನುಜಮತವೇ ಶ್ರೇಷ್ಠಪ್ರಜ್ಞೆ

ಜೀವಜಗಕೆ ಗಾನದೊಲುಮೆ ll


ಮೌಢ್ಯವ ತೊರೆಯುತ ಬನ್ನಿ

ಜ್ಞಾನವ ಪಡೆಯುವ ಬನ್ನಿ l

ವೈಚಾರಿಕತೆಯ ಜ್ಞಾನದ

ಬಾಗಿಲ ತೆರೆಯುವ ಬನ್ನಿ ll


Rate this content
Log in

Similar kannada poem from Action