STORYMIRROR

Prabhakar Tamragouri

Action Fantasy Others

4  

Prabhakar Tamragouri

Action Fantasy Others

ಚಡಪಡಿಕೆ

ಚಡಪಡಿಕೆ

1 min
237

ಸೂರ್ಯೋದಯದ ಕೆಂಬಣ್ಣ 

ಸೂರ್ಯಾಸ್ತದ ಹೊಂಬಣ್ಣ 

ನಡುವೆ ಕಾಣುವ ಅಂತರದಲ್ಲಿ 

ಇಬ್ಬರೂ ಪಿಸುಮಾತುಗಳಾಡಿ

ಭವಿಷ್ಯದ ರೂಪರೇಷೆಯ 

ಹೊಸ ನಕ್ಷೆ ಮಾಡಿ 

ದೇಹದೊಳಗೆ ಬರೆದು ಬಚ್ಚಿಟ್ಟಿದ್ದ 

ಕಣ್ಣೀರ ಕೊಡಿ !


ಅಲೆ ಬಂದು ಉರುಳುರುಳಿ 

ಬಚ್ಚಿಟ್ಟ ಹನಿಗಳನ್ನ 

ಕೊಚ್ಚಿಕೊಂಡು ಹೋಗಿ 

ಸಾಗರದ ತಳದಲ್ಲಿ ಹರಳಾದದ್ದು

ಕೆಲವು ಮುತ್ತು ....ಕೆಲವು ಉಪ್ಪು ....

ಕೆಲವು ಮಾಣಿಕ್ಯ .....!

ಮುಂಗಾರಿನ ಮಿಂಚು , ಸಿಡಿಲುಗಳ 

ನೆನಪಂತೆ ನೋಟ 

ಉಳಿದವು ಮತ್ತಷ್ಟು ಜರಡಿ 

ಕೊನೆಗೆ ಉಳಿದದ್ದು ರಾಡಿ !


ಗುಲ್ಮೊಹರ್ ಸುತ್ತ ಸುಳಿದು

ಕುಡಿನೋಟ ಬೀರಿ 

ಕಚಗುಳಿಯಿಟ್ಟ ತುಟಿಯಲಿ 

ಅರಳಿದ್ದ ಪಿಸುದನಿ 

ಆ ಪುಟ್ಟ ಕಣ್ಣ , ಮುಂಗುರುಳ ಬಣ್ಣ 

ಮೆಲುಗಾಳಿಗೆ ಕೆನ್ನೆ ಸ್ಪರ್ಶಿಸಿದ ಪುಳಕ 

ಎಲ್ಲಾ ಕಳೆದು ಹೋದ 

ಪ್ರಾಯದ ಮಾತುಗಳು 

ಈಗಲೂ ಆ ಕುಳಿರ್ಗಾಳಿ 

ಜಡಿ ಮಳೆ , ಸೂರ್ಯೋದಯ 

ಸೂರ್ಯಾಸ್ತ , ಕಾಮನಬಿಲ್ಲಿನ 

ಕಣ್ಣ ಮುಚ್ಚಾಲೆ .....

ಸೂತ್ರದ ಗೊಂಬೆಗಳಿಗೆಲ್ಲ 

ಏನೋ ಇಲ್ಲದ ಚಡಪಡಿಕೆ !!



Rate this content
Log in

Similar kannada poem from Action