STORYMIRROR

Lakumikanda Mukunda

Action Classics Inspirational

4  

Lakumikanda Mukunda

Action Classics Inspirational

ಗಜಲ್

ಗಜಲ್

1 min
452

ಕಾಣದ ಯಾನದಿ ಮೌನದ ಪಯಣವಿದೆ ಸಾಕಿ

ಮನದಿ ಸಾಸಿರ ಉತ್ತರದಕ್ಕದ ಪ್ರಶ್ನೆಗಳಿದೆ ಸಾಕಿ


ಬದುಕಿನ ಹೂವು ನಗದೆ ಏಕೋ ಪರಿತಪಿಸುತಿದೆ 

ಸುಗಂಧವಿಲ್ಲ ಬರಿ ಭ್ರಮೆಯ ಲೋಕವಿಲ್ಲಿದೆ ಸಾಕಿ


ಜೀವರಾಶಿಯೆಲ್ಲ ಜೀವಚ್ಚವವಾಗಿ ಮಲಗಿದೆ 

ಕಾವ ಕೈಗಳೂ ಮೈಮರೆತು ಮಲಗಿದಂತಿದೆ ಸಾಕಿ


ಮನದ ಮೋಡ ತಂತಾನೇ ಕರಗಿ ಕಣ್ಣಿರಿಡುತಿದೆ 

ಕಾಣದ ಕೈಗಳದುಷ್ಟ ಕೂಟದ ಶಂಕೆ ಮೂಡಿದೆ ಸಾಕಿ


ಎಲ್ಲ ಅರಿತು ಮರೆತು ಹೆಜ್ಜೆ ಇಡು ಲಕುಮಿಕಂದನೇ

ಈ ಜಗ ಬಲು ಸೋಜಿಗ ಕಾಂತದಂತೆ ಸೆಳೆದಿದೆ ಸಾಕಿ...



Rate this content
Log in

Similar kannada poem from Action