ಬಾಡದ ಕುಸುಮ
ಬಾಡದ ಕುಸುಮ
ದಾಸರಲ್ಲೆ ಶ್ರೇಷ್ಠರು ಇವರು
ಕನಕ ಅಗ್ರಗಣ್ಯ..
ಇಂದಿಗೂ ಅವರ ಕೀರ್ತನೆಗಳಿಗೆ
ಜಗದಲ್ಲಿದೆ ಮಾನ್ಯ..
ಬಾಡ ಗ್ರಾಮದ ಬಾಡದ ಕುಸುಮ
ನಮ್ಮ ಕನಕದಾಸರಣ್ಣ
ಇತಿಹಾಸದ ಪುಟಗಳಲೆಲ್ಲ
ನಿಜ ಭಕ್ತಿ ಕಾಣಿರಣ್ಣ..
ತಂದೆ ಬೀರಪ್ಪ ತಾಯಿ ಬಚ್ಚಮ್ಮ
ಉದರದಿ ಜನಿಸಿದರು..
ಬಂಕಾಪೂರದ ಬೆಂಕಿ ಚೆಂಡು
ನಮ್ಮ ತಿಮ್ಮಪ್ಪ ನಾಯಕರು..
ಖಡ್ಗವ ಹಿಡಿದು ಬಾಡ ಬಂಕಾಪೂರ
ಕಾಯುತ ನಿಂತವರು..
ತಂಬೂರಿ ಹಿಡಿದು ಉಡುಪಿ ಕೃಷ್ಣನ
ದರುಶನ ಪಡೆದವರು..
ಕಾಗಿನೆಲೆಯ ಆದಿಕೇಶವನ
ನೆನೆಯುತ ಬರೆದವರು..
ರಾಮಧಾನ್ಯದ ಚರಿತೆಯ ಬರೆದು
ಹೆಸರನು ಪಡೆದವರು..
