ಬಾಳಿನ ಫಲಿತಾಂಶ
ಬಾಳಿನ ಫಲಿತಾಂಶ
ಫಲಿತಾಂಶ ಕೆಟ್ಟದ್ದಾದರೇನು
ಒಳ್ಳೆಯದನ್ನೇ ಕಲಿಸುತ್ತದೆ..
ನೋವು ಇಲ್ಲದ ಬದುಕೆಲ್ಲಿದೆ?
ಸಾವಿರ ಚೂರಿ ಇರಿತಗಳಿಗೂ
ಅಂಜದ ಎದೆ ವಜ್ರವಾಗಿದೆ.
ಸಾವಿನಲ್ಲೂ ನಗುಮೊಗವಿದೆ.
ಯಾರಿಲ್ಲಿ ಬಂಧುಗಳು ಸ್ನೇಹಿತರು
ಎಲ್ಲ ಹೆಸರಿಗಷ್ಟೆ,ಕಲಿಯುತ್ತೆವೆ
ಹೊಸದಾಗಿ ಮತ್ತೆ ಬದುಕಲು..
ದಿಟ್ಟ ಬರವಣಿಗೆಗೆ ಸಾಧಿಸುತ್ತವೆ
ಕೆಟ್ಟತನ ಒಂದಿನ ಸಾಯಲೆಬೇಕು
ಗುಟ್ಟಾಗಿದ್ದ ಸತ್ಯ ಹೊಳೆಯುತ್ತದೆ
ಕಲಿಗಾಲದಲ್ಲಿ ಸುಳ್ಳಿಗೆ ಪ್ರಭುತ್ವ
ಸತ್ಯ ಕಾಲಕಸವಾಗಿ ನೋವುಂಡಿದೆ
ಲಕುಮಿಕಂದನ ಮಾತು ಮಿಥ್ಯವಲ್ಲ.