STORYMIRROR

Gireesh pm Giree

Abstract Drama Action

4  

Gireesh pm Giree

Abstract Drama Action

ಮಳೆ

ಮಳೆ

1 min
310


ಭಾನ ಮೇಘಗಳು ಮುತ್ತ ಹನಿಯ ಉದುರಿಸಲು

ಹಸಿರ ಕಳೆಯು ಇಳೆಯ ಸುತ್ತಲೂ ಮೂಡಲು

ಬತ್ತಿದ ಜಲಮೂಲಗಳಿಗೆ ಜೀವಕಳೆ ತುಂಬಲು

ಧರೆಗೆ ನವಮಾಸದ ಹೊಸ ಚೈತನ್ಯ ನೀಡಲು


ತಂಪೆರೆಯುವ ತಂಗಾಳಿಯು ಭುಮಿಯ ನೆಚ್ಚಿಸಲು

ಮಿಂಚಿನ ಸಂಚಲನ ಗುಡುಗಿನ ಗರ್ಜನೆ ಮನವ ಹೆದರಿಸಲು

ವರ್ಷ ಧಾರೆಯು ಹರುಷವ ಹೆಚ್ಚಿಸಲು ಮೆಚ್ಚಿಸಲು

ಮಳೆಗಾಲವು ತನುವ ತಣಿಸಲು ಸಂತಸವ ಉಣಪಡಿಸಲು


ಹರಿವ ನೀರಲಿ ಧೋಣಿ ಬಿಡುವ ಸಡಗರ

ಗೆಳೆಯರ ಮುಖದಲ್ಲಿ ಮೂಡಿತಿತ್ತು ನಗುವ ಚಿತ್ತಾರ

ಅಮ್ಮನ ಬೈಗುಳದ ನಡುವೆ ಮಳೆಯಲ್ಲಿ ನೆನೆಯುವ ಆಚಾರ

 ಆ ಹಳೆ ನೆನಪಿನ ದಿನಗಳ ಮೇಲೆ ಮಳೆಯ ಸಂಚಾರ


ಕೊಡೆಗಳು ಅರಳಿತು ಪರಿಸರ ಚಿಗುರಿತು

ಬಾನು ನಕ್ಕಿತು ಇಳೆಮಳೆಗೆ ಸೋತಿತ್ತು

ವರುಣ ಇದಕ್ಕೆಲಾ ನೀನೇ ಕಾರಣ

ಎಲ್ಲೆಡೆ ಕಟ್ಟಿದೆ ಹಸಿರ ತೋರಣ



Rate this content
Log in

Similar kannada poem from Abstract