ನನ್ನ ಭಾರತ
ನನ್ನ ಭಾರತ


ಪರಕೀಯರ ದಾಸ್ಯದಿಂದ ಮುಕ್ತಿ ಹೊಂದಿದ ಸುದಿನ
ಕ್ರಾಂತಿ ಶಾಂತಿ ತತ್ವದಿ ಬ್ರಿಟೀಷ್ ಸಾಮ್ರಾಜ್ಯ ಪತನ
ಉತ್ತರದಲ್ಲಿ ಹುಟ್ಟಿದ ಸ್ವಾತಂತ್ರ್ಯ ಸಂಗ್ರಾಮ ಕಥನ
ದಕ್ಷಿಣದಿ ಮಾಡಿತು ಮೂಡಿಸಿತ್ತು ಹೊಸ ಸಂಚಲನ
ನೆನೆಯಬೇಕು ಭಾರತೀಯರ ಅಮರ ತ್ಯಾಗ ಬಲಿದಾನ
ತ್ಯಾಗಿಗಳ ಮನದಿ ನೆನೆಯುವುದೇ ನಿಜವಾದ ಸನ್ಮಾನ
ಭಯಕ್ಕೆ ಅಂಜದೆ ಸಾವಿಗೆ ಹೆದರದೆ ಹೋರಾಟ
ಬಯಕೆ ಈಡೇರುವರೆಗೂ ನಿರಂತರ ಕಾದಾಟ
ರಣ ಕಲಿಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಕೂಗಾಟ
ಗುರಿ ಈಡೇರುವರೆಗಿನ ಅವರ ಹೋರಾಟ
ಕೊನೆಯಾಯ್ತು ಶತಮಾನಗಳ ನಿರಂತರ ಕಾದಾಟ
ಬಾನೆತ್ತರದಲ್ಲಿ ನನಸಿನ ತ್ರಿವರ್ಣ ಪತಾಕೆ ಹಾರಾಟ
ತಿರಂಗವ ಹಿಡಿದು ಕಂಗೊಳಿಸಿತ್ತು ಭಾರತಾಂಬೆಯ ಮುಕುಟ
ಬ್ರಿಟೀಷರ ವಿರುದ್ಧ ಸ್ವದೇಶಿ ಬಹಿಷ್ಕಾರ ತಂತ್ರ
ಭಾರತೀಯರಲ್ಲಿ ಮೂಡಿಸಿತು ಅದು ಏಕತೆಯ ಮಂತ್ರ
ನೇತಾರದಿಂದ ತಿಳಿಯಿತು ಅಸಲಿ ಬಿಳಿಯರ ಕುತಂತ್ರ
ಬ್ರಿಟೀಷರು ಅನುಭವಿಸಿದ ಸ್ಥಿತಿ ಮುಂದೆ ಅತಂತ್ರ
ಅವರ ಕಣ್ಣ ಮುಂದೆ ಇದ್ದ ಪರಿಹಾರ ಒಂದು ಮಾತ್ರ
ಭಾರತೀಯರ ಹೋರಾಟಕ್ಕೆ ಮಣಿದು ನೀಡುವ ಸ್ವಾತಂತ್ರ್ಯ