STORYMIRROR

Gireesh pm Giree

Abstract Children Stories Drama

4  

Gireesh pm Giree

Abstract Children Stories Drama

ಭಾವನೆ

ಭಾವನೆ

1 min
270

ಅರೆಯದೆ ಸೋತೆ ನೀ ನನ್ನವಳೆಂದು

ಅರಿತು ಬಾಡಿತು ನನ್ನ ಮನವಿಂದು

ಸ್ನೇಹ ಎಂಬ ಹೂವು ಮನದಲ್ಲಿ ಅರಳಿಸಿದೆ

ಆದರೆ ಅದನ್ನು ನೀನೇ ಇಂದು ತಿರುಚಿದೆ


ಹಗಲುಗನಸನ್ನು ಕಾಣುವಂತೆ ಮಾಡಿದೆ

ನಗುನಗುತ್ತಲೇ ಮೋಸಕ್ಕೆ ನೀ ದೂಡಿದೆ

ಮೊದಲೇ ಅರಿಯಬೇಕಿತ್ತು ನಿನ್ನ ತನ

ಶರಣಾಗುತ್ತಿರಲಿಲ್ಲ ಪ್ರೀತಿ ಪ್ರೇಮಕ್ಕೆ ನನ್ನ ಮನ


ಮುಗ್ಧ ಮನಸೊಳಗೆ ನೂರಾರು ಬಯಕೆ

ನುಚ್ಚುನೂರು ಮಾಡಿದೆ ಆಸೆಯ ಕನಸ ಕುಡಿಕೆ

ಔಷಧವೆ ಇಲ್ಲದಂತೆ ಮಾಡಿದೆ ಮನದ ಗಾಯಕ್ಕೆ

ಮೂಡದೆ ಇರುತ್ತಿದ್ದರೆ ಒಳಿತಿತ್ತು ನನ್ನೀ ಕೋರಿಕೆ


ಶಾಂತಿಯ ಹೂದೋಟದ ಮೈದಾನ ಹೃದಯ

ಎಲ್ಲವ ತಿಳಿಸಿತು ಜಗದ ಈ ಸಮಯ

ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ

ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ


Rate this content
Log in

Similar kannada poem from Abstract