STORYMIRROR

Raghavendra S S

Abstract Action Others

4  

Raghavendra S S

Abstract Action Others

ಹಣ

ಹಣ

1 min
378

ಹಣ ಹಣ ಹಣ

ಜೇಬು ತುಂಬ ಝಣ

ಹಣವಿಲ್ಲದ ಬದುಕು ಋಣವಿಲ್ಲದ ಸಂಬಂಧಂತೆ


ಹಣ ಹಣ ಹಣ

ನಿನ್ನದು ಎಂತಹ ವಿಶಿಷ್ಟ ಗುಣ

ನಡೆಯಲಿ ನಿನ್ನ ಅಹಂಕಾರದ ಪ್ರತೀಕ

ನಿನ್ನ ದಯೇ ಇರುವವನು ಆಗುವನು ಧನಿಕ

ನಿನ್ನ ನರ್ದಯೇ ಇಲ್ಲದವನಾಗುವನು ತಿರುಕ


ಹಣ ಹಣ ಹಣ

ಜೇಬು ತುಂಬ ಝಣ

ಸುಖ ಸಮೃಧ್ಧಿ ತರುವುದು ನೀನೇ

ಶಾಂತಿಯ ಸಂಬಂಧವನ್ನು ಬೆಸೆಯುವುದು ನೀನೇ

ನೀನಿಲ್ಲದೆ ಜಗವಿಲ್ಲ ನಿನ್ನ ಋಣ ತೀರಿಸಲಾಗದು ಯಾರಲ್ಲಿ


ಹಣ ಹಣ ಹಣ

ಜೇಬು ತುಂಬ ಝಣ

ಅಧಿಕಾರಶಾಹಿ ಪಡೆಯುವುದು ನಿನ್ನಿಂದಲೆ

ಕಳ್ಳರಾಗುವುದು ನಿನ್ನಿಂದಲೆ

ಮೋಸ , ಅನ್ಯಾಯ ಮಾಡುವುದು ನಿನ್ನಿಂದಲೆ


ಹಣ ಹಣ ಹಣ

ಜೇಬು ತುಂಬ ಝಣ

ಆಸೆ ಫಲಿಸುವುದು ನಿನ್ನಿಂದಲೆ

ದ್ವೇಷಿಸುವ ಸಂಕೊಲೆ ನಿನ್ನಿಂದಲೆ

ಸುಖ – ದುಃಖ ಉಂಟಾಗುವುದು ನಿನ್ನಿಂದಲೆ


ಹಣ ಹಣ ಹಣ

ಜೇಬು ತುಂಬ ಝಣ

ಭಗವಂತನ ದರ್ಶನ ಪಡೆಯಲು ನೀನೇ ಬೇಕು

ತೀರ್ಥ , ಪ್ರಸಾದ ಪಡೆಯಲು ನೀನೇ ಬೇಕು

ನೀನಿದ್ದರೆ ಕೈಲಾಸ , ನೀನಿಲ್ಲದಿದ್ದರೆ ವನವಾಸ

ನಿನ್ನಿಂದಲೇ ರೋಗ , ನಿನ್ನಿಂದಲೆ ಚಿಕಿತ್ಸೆ

ಹಣವೇ ಮಾನವನ ಬದುಕಿನ ತಹದಾರಿ



Rate this content
Log in

Similar kannada poem from Abstract