Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Raghavendra S S

Classics Inspirational Others

4.5  

Raghavendra S S

Classics Inspirational Others

ಕನಸು

ಕನಸು

1 min
293


ಕನಸು ಕನಸು ಕನಸು

ನಾ ಒಂದು ಕನಸು ಕಂಡೆ

ಆ ಕನಸು ನನಸಾಗಲು ಹೋರಾಡಿದೆ ಹಗಲಿರುಳು

ಕನಸೆಂಬ ಭಾವದಲ್ಲಿ ನನಸೆಂಬ ದೋಣಿಯಲಿ ಮೈಮರೆತೆ


ಕನಸು ಕನಸು ಕನಸು

ಕನಸಿಗೆ ಕೊನೆಯೆಂಬುದಿಲ್ಲ

ನನಸಿಗೆ ಮೊದೆಲೆಂಬುದಿಲ್ಲ

ಕನಸನ್ನು ನನಸುಮಾಡಲು ತಪಸ್ಸಿನ ಮೊರೆ ಅಗತ್ಯ

ಇಲ್ಲಿ ಯಾರ ಶಕ್ತಿಯ , ಅಹಂಕಾರದ ವಾಂಝೆ ಅನಗತ್ಯ


ಕನಸು ಕನಸು ಕನಸು

ನಾ ಕಂಡ ಕನಸು ಜೀವನದ ಭವಿಷ್ಯತ್ತಿನ ಮಾರ್ಗಗಳನ್ನು ನನಸು ಮಾಡಲು

ಕನಸನ್ನು ನನಸು ಮಾಡಲು ನನಗೆ ಬೇಕು ಸರ್ವ ಶಕ್ತಿಗಳ ಆಶೀರ್ವಾದ

ಹಿರಿಯ-ಕಿರಿಯರೆನ್ನದೆ ಕಾಣಬೇಕು ಕನಸು

ಮಕ್ಕಳು ಕಾಣಬೇಕು ಕನಸು , ಆ ಕನಸು ಮುಂದೆ ನನಸಾಗಲು ಸಹಕಾರಿ



ಕನಸು ಕನಸು ಕನಸು

ಕನಸಿನ ಶಕ್ತಿಯನ್ನು ನನಸು ಮಾಡಲು ತಾಳ್ಮೆ ಬೇಕು

ಕನಸಿನ ಭಾವವನ್ನು ನನಸಿನ ಮೆಟ್ಟಿಲನ್ನು ಮುಂದುವರೆಸಲು ಎಲ್ಲರ ಪ್ರೀತಿ ಬೇಕು

ಕನಸು ನನಸಾಗಲು ಆಶಾಭಾವನೆಯನ್ನು ಹೊಂದಿರಬೇಕು

ಜೀವನದಲ್ಲಿ ಉತ್ಸಾಹ , ಸಹಾನುಭೂತಿ , ಹೊಂದಾಣಿಕೆ ಅತ್ಯಗತ್ಯ



ಕನಸು ಕನಸು ಕನಸು

ಕನಸು ನನಸಾಗಲು ಗುರಿ ಮುಖ್ಯ

ಗುರಿಯನ್ನು ತಲುಪಲು ಯೋಜನೆ , ಯೋಚನೆ , ಆಲೋಚನೆ ಬಹಳ ಮುಖ್ಯ

ಕನಸು ಬಾಲ್ಯದಲ್ಲಿ ಮೂಡಿದಾಗ ಅದರ ಸವಿನೆನಪು ಹರೆಯದಲ್ಲೂ ಇರುತ್ತದೆ

ಜೀವನದ ಅಂತಿಮ ಗುರಿಯನ್ನು ತಲುಪಬಲ್ಲದು ಕನಸೆಂಬ ನನಸಿನ ಆಶೋತ್ತರಗಳು



Rate this content
Log in

Similar kannada poem from Classics