STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ಅಪರಿಚಿತ

ಅಪರಿಚಿತ

1 min
301

ಹುಟ್ಟು – ಸಾವಿನಲ್ಲಿ ಅಪರಿಚಿತರು ಮಾನವ ಬದುಕಿನಲ್ಲಿ ಕಾಣುವರು

ಈ ಜಗತ್ತು ಅಪರಿಚಿತವೆಂದಾದರೂ ಪರಿಚಿತವೆಂಬ ಬಂಧನ

ಪರಿಚಿತವೆಂದು ನಾವು ಅನೇಕ ಸುಖ- ದುಃಖಗಳ ಭಾವನೆಗಳನ್ನು ಹೇಳುವೆ


ನಂತರ ಅಪರಿಚಿತವೆಂದು ಹೇಳಿದಾಗ ದೂರವಾದೆನು

ಅಪರಿಚಿತರ ಸ್ನೇಹ – ಸಂಬಂಧ ಜಿಜ್ಞಾಸೆಗಳ ಹಂದರ

ಬದುಕಿನ ಅನೇಕ ಸ್ಥರಗಳಲ್ಲಿ ಪರಿಚಿತರಂತೆ ಮೂಡುವ ಆಶಾಭಾವನೆ


ಅಪರಿಚಿತ ಗೆಳೆಯನ ಅನುಬಂಧವನು ಪರಿಚಿತವೆಂಬಂತೆ

ಅಪರಿಚಿತ ಗೆಳೆಯನ ಆನಂದವೂ ಇರಲಿ ಎಂದೆಂದೂ

ಎಂದೆಂದೂ ಮರೆಯದು ಹೃದಯದ ರಾಗ


ರಾಗವದು ಹೃದಯದ ಮಧುರ ಅನಂತ

ಅನಂತವದು ನಮ್ಮ ಅಪರಿಚಿತ ಸ್ನೇಹ ಅಳಿಯದ ರಾಗ

ಬಾನು – ಬುವುಯು ಒಂದಾದರೂ ಅಳಿಯದ ಮೌನರಾಗ


ಅಪರಿಚಿತವಾದರೂ ಪರಿಚಿತವೆಂಬಂತೆ ಅಳಿಸಲಾಗದ ನಂಟು

ಪರಿಚಿತವೆಂಬ ಭಾವ ಹೃದಯದಾಳದಲ್ಲಿ ಅರಳುವ ಸ್ನೇಹ ಭಾವ

ಪರಿಚಿತ ಹಾಗೂ ಅಪರಿಚಿತದ ಭಾವವೇ ವಿರಚಿತ



Rate this content
Log in

Similar kannada poem from Abstract