STORYMIRROR

Raghavendra S S

Action Classics Inspirational

4  

Raghavendra S S

Action Classics Inspirational

ಸ್ವಾತಂತ್ರ್ಯ

ಸ್ವಾತಂತ್ರ್ಯ

1 min
262

ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ

ದೇಶಕ್ಕೆ ಬಂದಿತು ಸ್ವಾತಂತ್ರ್ಯ

ಎಲ್ಲರ ಬದುಕಿಗೆ, ನಾಡಿಗೆ , ಕನಸಿಗೆ ಬಂದಿತು ಸ್ವಾತಂತ್ರ್ಯ

ಬ್ರಿಟೀಷರ ದಬ್ಬಾಳಿಕೆಯನ್ನು ಹೋಗಲಾಡಿಸಿ ಅಸಹಕಾರ ಚಳುವಳಿಯ ವಿಮುಕ್ತಿ

ಸ್ವಾತಂತ್ರ್ಯ ಕಹಳೆಯನ್ನು ಸಾರುತ ಹೇಳಿ ಸಹಕಾರದ ನೀತಿ ಅನುಸರಿಸಿ


ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ

ಭಾರತ ಮಾತೆಗೆ ಜೈ ಘೋಷ ಹಾಕುತ

ಸ್ವಾತಂತ್ರ್ಯ ಗೀತೆಯ ಹಾಡುವ ಕೈ ಜೋಡಿಸಿ

ಸ್ವಾತಂತ್ರ್ಯದ ಸುದಿನ ವೀರರ ಮನದಲಿ ನೆನಪಿಸುತ

ನಾಡಿಗೆ ಪ್ರಾಣ ತ್ಯಾಗವ ಮಾಡಿದ ಸುವರ್ಣ ದಿನವಿದು

ನಾಡಿಗೆ ಪ್ರಾಣ ತ್ಯಾಗವ ಮಾಡಿದ ಯೋಧರ ಸ್ಮರಿಸುತ ಚಿತ್ರಕ್ಕೆ ವಂದಿಸಿರಿ


ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ

ಸ್ವಾತಂತ್ರ್ಯೋತ್ಸವ ಬಂದಿತು ಬನ್ನಿರಿ

ಎಲ್ಲರಿಗೂ ವಿಜಯೋತ್ಸವದ ಸಂತಸ ತಂದಿತು

ದೇಶದ ದಶ ದಿಕ್ಕೂಗಳಲ್ಲೂ ತಿರಂಗ ಭಾವುಟ ಹಾರಿಸಿರಿ


ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ

ಸ್ವಾತಂತ್ರ್ಯದ ಹಣತೆಯ ದೀಪವ ಹಚ್ಚೋಣ

ಸಿಪಾಯಿ ದಂಗೆಯ ಪೂರ್ಣ ಚಿತ್ರಣ

ಮಕ್ಕಳ ಮನಸ್ಸಿಗೆ ತಲುಪುವಹಾಗೆ ತಲುಪಿಸಿರಿ

ಮಕ್ಕಳ ಹೃದಯದಿ ಸ್ವತಂತ್ರ್ಯ ಭಕ್ತಿಯ ಒಲವು ಮೂಡಿಸಿರಿ

ಸ್ವಾತಂತ್ರ್ಯ ಗೀತೆಯ ಹಾಡುತ ಭಾರತಮಾತೆಗೆ ಜೈ ಅನ್ನಿ



ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ

ನಮ್ಮೆಯ ನಾಡಿದು ಹೆಮ್ಮೆಯ ಬೀಡಿದು

ಸಾಧು , ಸಂತರು ನೆಲೆಸಿದ ಹೆಮ್ಮೆಯ ನೆಲೆವೀಡು

ಗಂಗಾ, ಯಮುನಾ , ಕಾವೇರಿ ಮುಂತಾದ ನದಿಗಳು ಹರಿಯುವ ಪುಣ್ಯಭೂಮಿ

ಸತ್ಯ , ಶಾಂತಿ , ತ್ಯಾಗ , ಐಕ್ಯತೆಯ ನಾಡು ಅದುವೇ ಸ್ವಾತಂತ್ರ್ಯದ ಬೀಡು



Rate this content
Log in

Similar kannada poem from Action