STORYMIRROR

Revati Patil

Action Inspirational Others

3  

Revati Patil

Action Inspirational Others

ಮರೆಯದೆ ಧನ್ಯವಾದ ಹೇಳಿರಿ

ಮರೆಯದೆ ಧನ್ಯವಾದ ಹೇಳಿರಿ

1 min
197

ಬದಲಾಗಿದ್ದು ತಾರೀಕು ಮಾತ್ರ 

ಬೇರೆಲ್ಲ ಯಥಾ ಸ್ಥಿತಿಯೇ 

ಬದಲಾಗಿದ್ದು ದಿನಗಳು ಮಾತ್ರ 

ಬೇರೆಲ್ಲ ಯಥಾ ಸ್ಥಿತಿಯೇ 


ವರ್ಷವಲ್ಲ, ಯುಗಾದಿಯಲ್ಲ 

ಹೊಸ ಸಡಗರ ಸಂಭ್ರಮಕ್ಕೆ, 

ನಮ್ಮ ಅಸಡ್ಡೆ, ಆಲಸ್ಯಗಳು 

ಮತ್ಸರ ಲೋಭಗಳು ಕಳೆದಾಗಲೇ 

ಕಳೆಗಟ್ಟುವುದು ನೋಡು ಸಂಭ್ರಮಕ್ಕೆ 


ಲಾಕ್ ಡೌನ್ ಜೀವನ ಮರೆಯದಿರಿ 

ಈ ದಶಕದಂತ್ಯಕ್ಕೆ ಅದನ್ನೂ ನೆನೆಯಿರಿ 

ನಿಮ್ಮವರ ಜೊತೆ ನೀವೆಷ್ಟು ಸಮಯ ಕಳೆದಿರಿ 

ಈಗಲಾದರೂ ಕೊರೋನಾ ವೈರಸ್ಸಿಗೆ 

ಮರೆಯದೆ ಧನ್ಯವಾದ ಹೇಳಿರಿ 


ಬದಲಾಗಬೇಕಿದೆ ದಿನದಿನವೂ 

ಉತ್ತಮದಿಂದ ಅತ್ಯುತ್ತಮದತ್ತ 

ನೋವು, ನಲಿವನ್ನು ಸ್ವೀಕರಿಸಿ 

ಧನಾತ್ಮಕವಾಗಬೇಕಿದೆ ನಮ್ಮ ಚಿತ್ತ 

ಪ್ರಕೃತಿಯೊಂದಿಗೆ ಪ್ರತಿಜ್ಞೆಯಿದು 

ನಮ್ಮ ಚಿಂತನೆ, ನಾವೂ ಬದಲಾಗುವತ್ತ


Rate this content
Log in

Similar kannada poem from Action