Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Action Classics Inspirational

4  

Arjun Maurya

Action Classics Inspirational

ವರ್ಷಧಾರೆ

ವರ್ಷಧಾರೆ

1 min
362


ಹರುಷ ತಂದ ವರ್ಷಧಾರೆ

ಬಿಡದೆ ಸುರಿವುದು l

ಭೂಮಿಯೊಳಗೆ ಬೀಜವೊಡೆದು

ಚಿಗುರು ಜಿಗಿಹುದು ll


ಮುತ್ತಿನ್ಹನಿಗಳಲ್ಲಲ್ಲಿ

ಎಲೆಯ ಎದೆಯ ಗೂಡಿನಲ್ಲಿ l

ಸ್ವಾತಿಮುತ್ತು ಹರಳಿನಂತೆ

ಉರುಳುತಿವೆ ಅರಳಿನಲ್ಲಿ ll


ಮೋಡದಲ್ಲಿ ಮಿಂಚ ರೇಖೆ

ಫಳಾರನೆ ಹೊಳೆವಲ್ಲಿ l

ಗುಡುಗಿನಂತೆ ಎದ್ದು ಬಂದ

ಚಿಗುರ‌‌ಹಾಸು ನೋಡಲ್ಲಿ ll


ಆಸೆಗೆಲ್ಲ‌ ಹಸಿರು ಬಳಿದ

ಬೆಟ್ಟಗುಡ್ಡ ಗದ್ದೆ ತೋಡು l

ಹೂಡು ನೊಗವ ಸಂತಸದಿ

ಕೆಸರಿನೊಳಗೆ ಬದುಕ ಹೂಡು ll


ನೇಗಿಲೊಳು ಬಾಗಿನೊಳು

ಗದ್ದೆಯೊಡಲ ಒದ್ದೆಯೊಳು l

ಪಚ್ಚೆಪೈರು ಬೇರಿನೊಳು

ಮತ್ತೆ ಭೂಮಿಗಾನದೊಡಲು ll


ಹಸಿದ ಭೂಮಿ ಗೂಡಲೊಂದು

ಜಲದ ಹನಿಗಳಾಟವಾಡಿ l

ಹಸಿರ ರೆಕ್ಕೆ ಚಿತ್ತಾರ ಮೂಡಿ

ಜೀವಸೃಷ್ಠಿ ಮೋಡಿ ನೋಡಿ ll


ಹರುಷ ತಂದ ವರ್ಷಧಾರೆ

ಬಿಡದೆ ಸುರಿವುದು l

ಭೂಮಿಯೊಳಗೆ ಬೀಜವೊಡೆದು

ಚಿಗುರು ಜಿಗಿಹುದು ll



Rate this content
Log in

Similar kannada poem from Action