ಏಲಿಯನ್ ಜೀವಿಗಳು
ಏಲಿಯನ್ ಜೀವಿಗಳು
ಏಲಿಯನ್ ಇದ್ದಾವೆ ಅಂತೆ
ಅನ್ಯಗ್ರಹಗಳ ಒಳಗೆ
ಅವಕೆ ಅನ್ಯಗ್ರಹ ಜೀವಿಗಳೆಂದೆ ಹೆಸರಂತೆ
ಏಲಿಯನ್ ಇದ್ದಾವೆ ಅಂತೆ
ಅವಕೆ ದೊಡ್ಡ ದೊಡ್ಡ ಕಣ್ಣುಗಳಿವೆಯಂತೆ
ಅವು ನೋಡಲು ವಿಚಿತ್ರವಾಗಿ ಇರುತ್ತವಂತೆ
ಏಲಿಯನ್ ಇದ್ದಾವೆ ಅಂತೆ
ಅವು ಹಾರುವ ತಟ್ಟೆಯಲ್ಲಿ ಬರುತ್ತವಂತೆ
ಅವುಗಳ ವಾಹನ ಹಾರುವತಟ್ಟೆಯಂತೆ
ಏಲಿಯನ್ ಇದ್ದಾವೆ ಅಂತೆ
ಮನುಷ್ಯನಿಗಿಂತಲು ಬಲಶಾಲಿಯಂತೆ
ಅವುಗಳ ಬಳಿ ಆಯುಧಗಳು ಇವೆ ಅಂತೆ
ಏಲಿಯನ್ ಇದ್ದಾವೆ ಅಂತೆ
ಅನ್ಯಗ್ರಹದ ಒಳಗೆ ಇವೆಯಂತೆ
ಭೂಮಿಗು ನುಸುಳಲು ಹೊಂಚು ಹಾಕಿವೆಯಂತೆ
ಏಲಿಯನ್ ಇದ್ದಾವೆ ಅಂತೆ
ಇದರ ಬಗ್ಗೆ ಅಧ್ಯಯನ ನಡೆಯುತ್ತಿದೆಯಂತೆ
ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರಂತೆ.
