STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಏನು ಧನ್ಯರೋ

ಏನು ಧನ್ಯರೋ

1 min
9

ರಾಮಮಯವಾಗಿಹುದು ಅಯೋಧ್ಯೆ 

ರಾಮನಾಮ ಹರಿಯುತಿಹುದೆಲ್ಲೆಲ್ಲೂ  

ಪುನೀತವಾಯಿತು ರಾಮ ಜನ್ಮಭೂಮಿ  

ಆಗಮಿಸಿದ ತನ್ನ ಮನೆಗೆ ಬಾಲರಾಮ 


ಅರಳಿದವು ಕೋಟಿ ಕೋಟಿ ಮನಗಳು 

ಮೊಳಗಿದವು ರಾಮನಾಮ ಏಕಕಂಠದಿ

ಪೂತು ಫಲಿಸಿತು ದಶಕಗಳ ಹೋರಾಟ

ರಾಮಮಂದಿರ ಕನಸು ನನಸಾಯಿತು


ಕಳೆಯಿತು ದಶಕಗಳ ಸೂತಕ ಕೋಸಲಕೆ  

ಮತ್ತೆ ಸಿಂಗಾರಗೊಂಡಿಹಳು ಅಯೋಧ್ಯಾ

ಆ ದೇವೇಂದ್ರನ ಸಗ್ಗದೋಪಾದಿಯಲಿ

ನಗುತ ಕಾಯುತಿಹಳು ಬಾಲರಾಮನಿಗಾಗಿ


ಮೈಮರೆತಿಹರು ಸಹಸ್ರ ಸಹಸ್ರ ಭಕ್ತರು

ತಮ್ಮ ಆರಾಧ್ಯ ದೈವ ರಾಮನಾಗಮನದಿ

ಇದೇನು ಕಲಿಯುಗ ಮುಗಿಯಿತೋ?

ಮತ್ತೆ ತ್ರೇತಾಯುಗ ಉದಯಿಸಿತೋ?


ಧನ್ಯತೆಯ ಭಾವ ಎಲ್ಲರ ಮನದಲ್ಲಿ 

ದಿವ್ಯತೆಯ ಹೊಳಪು ನಯನದಲ್ಲಿ 

ಭಕ್ತಿಯ ಭಾವ ಎಲ್ಲರಾ ಹೃದಯದಲ್ಲಿ

ರಾಮನಾಮವೊಂದೇ ಎಲ್ಲರ ಬಾಯಲ್ಲಿ 


ಏನು ಧನ್ಯರೋ ನಾವು ಇಂದು ?

ಎನಿತು ಭಾಗ್ಯವಂತರೋ ನಾವು?

ಮರಳಿ ಬರಲಿ ಆ ರಾಮರಾಜ್ಯ

ಆಗಲಿ ಭಾರತದ ಭಾಗ್ಯೋದಯ.  


Rate this content
Log in

Similar kannada poem from Abstract