STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಬಾಪೂಜಿಯ ನೆನೆಯೋಣ

ಬಾಪೂಜಿಯ ನೆನೆಯೋಣ

1 min
248

ನಮ್ಮ ದೇಶಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ 

ಹೆಮ್ಮೆಯ ಬಾಪೂಜಿಯ ನೆನೆಯೋಣ ಬನ್ನಿ

ಬ್ರಿಟಿಷರ ಕೈಯಿಂದ ನಮಗೆ

ಮುಕ್ತಿ ಕೊಡಿಸಿದ ಮಹಾನ್ ಚೇತನವ

ನೆನೆಯೋಣ ಬನ್ನಿ

ಅಹಿಂಸಾ ಮಾರ್ಗದಿಂದಲೇ

ಛಲ ಬಿಡದೆ ಹೋರಾಡುತಲಿ 

ಉಪ್ಪಿನ ಸತ್ಯಾಗ್ರಹವನು ಮಾಡಿ

ಸ್ವಾತಂತ್ರ್ಯ ದೊರಕಿಸಿಕೊಟ್ಟ 

ಬಾಪೂಜಿಯ ನೆ‌ನೆಯೋಣ ಬನ್ನಿ

ಬ್ರಿಟಿಷರೆ ಭಾರತ ಬಿಟ್ಟು 

ತೊಲಗಿ ಎನ್ನುತ ಜಗ್ಗದೆ

ಮುನ್ನುಗ್ಗಿ ಶಾಂತಿಯ ಮಾರ್ಗದಿ

ಸ್ವಾತಂತ್ರ್ಯದ ಹಾದಿಯ ಸುಗಮಗೊಳಿಸಿದ

ಮಹಾನ್ ವ್ಯಕ್ತಿಯ ನೆನೆಯೋಣ ಬನ್ನಿ

ಮಾಡು ಇಲ್ಲವೆ ಮಡಿ ಎನ್ನುತ

ತಮ್ಮ ಇಳಿ ವಯಸಿನಲು ಹೋರಾಡುತ

ಚರಕವ ಹಿಡಿದು ನ್ಯಾಯದ ಹಾದಿಯಲಿ ನಡೆಯುತ

ದೇಶಕ್ಕಾಗಿ ತಮ್ಮ ಪ್ರಾಣವನೆ ಅರ್ಪಿಸಿದ

ಮಹಾನ್ ಸ್ವಾತಂತ್ರ್ಯ ಹೋರಾಟಗಾರ 

ಬಾಪೂಜಿಯ ನೆನೆಯೋಣ ಬನ್ನಿ

ಪ್ರತಿ ಸ್ವಾತಂತ್ರ್ಯ ದ ಉತ್ಸವವು 

ಗಾಂಧೀಜಿಯವರ ಮಹಾನ್ ಕೊಡುಗೆಯು

ನೆನೆಯೋಣ ಬನ್ನಿ ಪ್ರತಿ ನಿತ್ಯವು

ನೆನೆಯೋಣ ಬನ್ನಿ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics