ನಿಗೂಢ
ನಿಗೂಢ
ಕಥೆಗಳಲ್ಲಿ ಅಡಗಿರುವುದು ನಿಗೂಢತೆ
ಮಾನವನ ಜೀವನವೇ ಒಂದು ರೀತಿಯ ನಿಗೂಢ
ಕಲ್ಪನೆಗಳಲ್ಲಿ ಅಡಗಿದೆ ನಿಗೂಢತೆಯ ಕಿರಣ
ಚಲನಚಿತ್ರಗಳಲ್ಲಿ ಅಡಗಿದೆ ನಿಗೂಢತೆಯ ಹೊಂಗಿರಣ
ಪ್ರೇಮಕತೆ , ಪತ್ತೆದಾರಿ ಕಥೆಗಳಲ್ಲಿ ಅಡಗಿರುವುದು ನಿಗೂಢತೆಯ ಹಾಸ್ಯ
ಅತಿಮಾನುಷ , ಗೋರಿ ಕಥೆಗಳಲ್ಲಿ ಅಡಗಿರುವುದು ನಿಗೂಢತೆಯ ಅಪಹಾಸ್ಯ
ಇತಿಹಾಸದ ಪುಟಗಳಲ್ಲಿ , ಪುರಾಣಗಳ ಪುಟಗಳಲ್ಲಿರುವುದು ನಿಗೂಢತೆಯ ಸಾಹಿತ್ಯ
ಕೆಲವುಕಥೆಗಳಲ್ಲಿ ಅಡಗಿರುವುದು ಅಸ್ವಾಭಾವಿಕ ಅಸತ್ಯಗಳು
ಕೆಲವು ಕಾದಂಬರಿಗಳಲ್ಲಿ ಅಡಗಿರುವುದು ಸ್ವಾಭಾವಿಕ ಸತ್ಯಗಳು
ನಿಗೂಢತೆಗಳು ಅತಿಮಾನುಷ ಆಶಕ್ತಿಗಳ ಕುರುಹುಗಳು
ನಿಗೂಢತೆಗೆ ನೈಜತೆಯ ಯಾವುದೇ ಸಿದ್ಧಾಂತಗಳಿಲ್ಲದ ಸಂಕೇತ

