STORYMIRROR

Kiran Kumar S K

Abstract Drama Others

4  

Kiran Kumar S K

Abstract Drama Others

ಸಗ್ಗದ ಸಾಗರ

ಸಗ್ಗದ ಸಾಗರ

1 min
203


ಮುಂಜಾನೆ ಕೋಳಿಯ ಕೂಗಿಗೆ,

ಏಳುವುದು ಹಳ್ಳಿಯ ಲೋಕ!

ಮೂಡಣದ ರವಿಯ ಕಿರಣಗಳಿಗೆ

ತೆರೆ ಕಾಣುವುದು ಸಗ್ಗದ ಲೋಕ!!


ಸೊಬಗನು ಪಸರಿಸುವ ತರುಲತೆಗಳು,

ನಡುವೆ ನೆಮ್ಮದಿಯಲ್ಲಿ ಹಳ್ಳಿಯ ಜನ!

ನಿಶ್ಚಿಂತೆಯಾಗಿ ಹಾರಾಡುವ ಹಕ್ಕಿಪಿಕ್ಕಿಗಳು,

ಮುಕ್ತವಾಗಿ ಬೆಸೆಯುವ ಜೀವಿಗಳ ಜೀವನ!!


ಕಟ್ಟಿಗೆ ಒಲೆಯ ಬಿಸಿಬಿಸಿ ನೀರಲ್ಲಿ,

ಜಳಕವಾಡುವ ಹಳ್ಳಿಯ ಜನ!

ಘಮಘಮಿಸುವ ಅಡಿಗೆಯಲ್ಲಿ,

ಸಂತೃಪ್ತದಿ ಸವಿಯುವ ಹೃನ್ಮನ!!


ಕೊಟ್ಟಿಗೆಯ ಜೀವಗಳ ಕೂಗಿನ ದನಿಗೆ,

ಪ್ರೇಮದಲಿ ಸ್ಪಂದಿಸುವ ಹಿರಿತನ!

ಹಸು, ಕುರಿ,ಕೋಳಿ, ಮೇಕೆಗಳ ಪಾಲಿಗೆ

ಹಳ್ಳಿಯವನ ಮನೆಯೇ ವಾಸಸ್ಥಾನ!!


ಹಳ್ಳಿಯ ಕಟ್ಟೆಯಲ್ಲಿ ಮುಕ್ತ ವಿಚಾರ,

ಸಮಸ್ಯೆಗಳಿಗೆ ಸರಳ ಪರಿಹಾರ!

ಪ್ರೀತಿ ಪ್ರೇಮದಿ ಬೆಸೆಯುವ ಸಾರ,

ಹಳ್ಳಿಯೊಂದು ಸಗ್ಗದ ಸಾಗರ!!


Rate this content
Log in

Similar kannada poem from Abstract