STORYMIRROR

Kiran Kumar S K

Abstract Drama Others

4  

Kiran Kumar S K

Abstract Drama Others

ರೂಪಸಿ

ರೂಪಸಿ

1 min
341


ನಿನ್ನ ಮನದ ಅಲೆಯು ಬೀಸಿ

ನನ್ನ ಎದೆಯ ತಟ್ಟಿತು

ಚಿನ್ನ ನೀನು ಬೆಲೆಯು ರತ್ನ

ನನ್ನ ಬಾಳು ಹಿಗ್ಗಿತು


ಮನವ ಹರಸಿ ಬಂದಿರುವಳು

ಅವಳು ದಿವ್ಯ ದೇವಿಯು

ನೆನೆದು ನಿನ್ನ ರೂಪವನ್ನು

ನೆನೆಪೆ ಅಮರ ಶಕ್ತಿಯು


ಒಲವ ಧಾರೆ ಹರಿಸಿರುವಳು

ಒಲಿದು ಬಂದ ರೂಪಸಿ

ಚೆಲುವ ರೂಪ ಧರಿಸಿರುವಳು

ನಲಿವು ತಂದ ಮಾನಸಿ


ಎದೆಯ ಬಡಿತದಲ್ಲಿ ನೀನು

ಸುಧೆಯ ರಾಗ ನಿನ್ನದು

ಮಧುರ ನೆನಪಿನಲ್ಲಿ ನಾವು

ಅದರ ಜೀವ ನಮ್ಮದು 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract