ಅಮ್ಮ ನೀನೆ ನನ್ನ ದೇವರು
ಅಮ್ಮ ನೀನೆ ನನ್ನ ದೇವರು
ಸಗ್ಗದ ತಾಣವದು ನಿನ್ನಯ ಮಡಿಲು
ನೀಡಿದೆ ಅಮೃತದ ಸಿಂಚನದ ಹೊನಲು
ನಿನ್ನ ಗರ್ಭಗುಡಿಯಲಿ ಜನುಮ ತಾಳಲು
ಒಲುಮೆಯ ಹೂರಣದಲಿ ನನ್ನ ಸಾಕಲು
ನವಮಾಸದಿ ಹೊತ್ತು ಬೆಳೆಸಿದ ದೇವತೆ
ಅನುಚಣ ನಿನ್ನ ಪ್ರೀತಿಪ್ರೇಮದ ಭದ್ರತೆ
ಕಣಕಣವು ತೋರುವುದು ನನ್ನ ಆಧ್ಯತೆ
ನಿನ್ನೊಡಲಲಿ ನಾನೆಂದಿಗೂ ಸುರಕ್ಷತೆ
ನಿನ್ನ ಸಾನಿಧ್ಯವೇ ನನಗೆ ಉಸಿರು
ನೀನಿರಲು ಹರುಷವು ಸಹಸ್ರಾರು
ನನ್ನ ಬಾಳನ್ನು ಕಟ್ಟಿಕೊಟ್ಟ ಗುರು
ಅಮ್ಮ ನೀನೆ ನನ್ನ ದೇವರು!
ಕಿರಣ್ ಕುಮಾರ್ ಎಸ್ ಕೆ
ಬೆಂಗಳೂರು
