ಉಜ್ವಲವಾಗಲಿ
ಉಜ್ವಲವಾಗಲಿ
ಒಳ್ಳೆಯ ನಡೆ,
ದೃಢ ಸಂಕಲ್ಪದೊಡೆ,
ಸಾಗುತ ಗಮ್ಯದೆಡೆ,
ವಿಜಯವು ನಿನ್ನೆಡೆ!!
ಸವಾಲುಗಳ ಸಮಾಜ,
ಅಡ್ಡಿಅಡಚಣೆಗಳು ಸಹಜ,
ಇವುಗಳನೆದುರಿಸು ಮನುಜ,
ನೀನಾಗುವೆ ಜೀವನದಲ್ಲಿ ರಾಜ!!`
ತನುವು ತೇಜಸ್ಸಿನಲಿ,
ಮನಸ್ಸಿನಲ್ಲಿ ದೃಢತೆಯಿರಲಿ,
ಅಂತರಾತ್ಮವು ದಿಕ್ಕಾಗಲಿ,
ಜೀವನ ಉಜ್ವಲವಾಗಲಿ!!
