STORYMIRROR

Kiran Kumar S K

Abstract Drama Others

4  

Kiran Kumar S K

Abstract Drama Others

ಸ್ವರ್ಗದ ಹಾಸು

ಸ್ವರ್ಗದ ಹಾಸು

1 min
324


ರಂಗುರಂಗಿನ ಚೆಂದದ ತೊಟ್ಟಿಲು,

ನೋಡಲು ಮನವ ಸೆಳೆಯಲು,

ಸುಖನಿದ್ರೆಯಲಿ ಮಗು ತೇಲಲು,

ಮಗುವಿಗಿದು ತಾಯಿಯ ಮಡಿಲು!!


ಬಣ್ಣಬಣ್ಣದ ಸುಂದರ ಕುಶಲ ಕಲೆ,

ಮಗುವಿನ ಅಳು ನಿಲ್ಲಿಸಲು ಗಿರಗಿಟ್ಟಲೆ,

ಆನಂದದಲಿ ತೇಲಿಸುವ ಉಯ್ಯಾಲೆ,

ತಾಯಿಮಗುವಿಗೆ ನೆಮ್ಮದಿಯ ಅಲೆ!!


ತೂಗುತಲಿ ಜೋಗುಳವ ನುಡಿಸು,

ಶಾಂತಿಯಲಿ ಮಗುವನ್ನು ಆಡಿಸು,

ಹರುಷದಲಿ ಮಿಂದೇಳುವ ಕೂಸು,

ತೊಟ್ಟಿಲೆ ಮಗುವಿಗೆ ಸ್ವರ್ಗದ ಹಾಸು!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract