STORYMIRROR

ಹೃದಯ ಸ್ಪರ್ಶಿ

Abstract Classics Others

4  

ಹೃದಯ ಸ್ಪರ್ಶಿ

Abstract Classics Others

ಮನದ ಮಾತುಗಳು

ಮನದ ಮಾತುಗಳು

1 min
405


ಹೆಸರಿಲ್ಲದ ಬಂಧವಿದು

ಹೆಸರಿಡುವ ಪ್ರಯತ್ನ ಮಾಡೆನು

ಆಸೆಯಿಂದ ಕಟ್ಟಿದ ಕನಸಿದು

ನನಸಾಗುವ ಮೊದಲೇ ಕಸಿದುಕೊಂಡಿಹನು


ಕನಸು ನನಸು ಎಂಬ ಆಟದಿ

ಒಂಟಿಯಾದೆನು ನಾ..

ಇಲ್ಲದ ಆಸೆಯಲಿ ಬಂಧಿಯಾಗಿ

ನರಳಾಡಿದೆ ನಾ..


ಪೋಣಿಸಿದ ಅಕ್ಷರ ಮಾಲೆ

ಬಿಚ್ಚಿಕೊಂಡಿದೆ ತನ್ನ ಗಂಟನ್ನು

ನೆಲದಿ ಚೆಲ್ಲಿದ ಮುತ್ತುಗಳು

ಆರಿಸುವ ಕೈಗಳಿಲ್ಲದೆ ಅನಾಥವಾಗಿದೆ


ಆಡಿ ಕುಣಿದ ಮನಸಂದು

ಮೂಕವಾಗಿದೆ ಇಂದು

ಬಯಲಲಿ ನಲಿದ ಹಕ್ಕಿಯಂದು

ಮನಃ ಪಂಜರದಿ ಬಂಧಿಯಾಗಿದೆ ಇಂದು







Rate this content
Log in

Similar kannada poem from Abstract