STORYMIRROR

ಹೃದಯ ಸ್ಪರ್ಶಿ

Abstract Classics Inspirational

4  

ಹೃದಯ ಸ್ಪರ್ಶಿ

Abstract Classics Inspirational

ಶುಭೋದಯ

ಶುಭೋದಯ

1 min
285

ರವಿಯ ಪ್ರೀತಿಗೆ ಸೋತು

ಅರಳಿ ನಿಂತಿವೆ ಸೂರ್ಯಕಾಂತಿಯ ಘಮ

ಜೊತೆ ನೀಡಿವೆ ಮಳೆ ಹನಿಯ ತುಂತುರು

ಹಕ್ಕಿಗಳ ಕಲರವ.. ಜಿಗಿ ಹುಳುಗಳ ಝೇಂಕಾರ

ಆಯಿತಾಗಲೇ ಹೊಸ ಕನಸುಗಳ ಶುಭೋದಯ


ಮತ್ತೆ ಬಂದಿವೆ ಹೊಸ ಚೈತನ್ಯದ ನವ ದಿನ

ಹೊತ್ತು ತಂದಿದೆ ಹೊಸ ಬಯಕೆ ಹೊಸ

ಕನಸುಗಳ ನವ ಜೀವನ


ಕಂಡ ಕನಸುಗಳ ನನಸಾಗಿಸೋ ಛಲ

ಸಾಧನೆಯ ಹಾದಿಯಲಿ ಮುನ್ನಡೆಯುವ ಹಂಬಲ

ನಿನ್ನೆಗಳ ನೋವಿನಲಿ ಇರಲಿ ನಾಳೆಗಳ ಬಲ

ಈಡೇರಲಿ ನಿನ್ನೆಲ್ಲಾ ಕನಸುಗಳ ಆಗರ...


ಹೊಸ ಕನಸ ಹೊತ್ತು ಏರಿದ್ದಾನೆ ಸೂರ್ಯ ಮೂಡಣ

ನೀ ತೊಡು ಅದ ಈಡೇರಿಸುವ ಕಂಕಣ

ಗಮ್ಯ ಸೇರಲಿ ನಿನ್ನ ಪಯಣ...

ಸೋಲಿದ್ದರೂ ಗೆಲ್ಲಬೇಕು, ಅದೇ ಜೀವನ...!



Rate this content
Log in

Similar kannada poem from Abstract