ಸ್ವಾತಂತ್ರ್ಯ
ಸ್ವಾತಂತ್ರ್ಯ


ನಾವು ಪ್ರಜೆಗಳು ನಾವು ಪ್ರಭುಗಳು
ಸ್ವತಂತ್ರ ಭಾರತದ ಕಡುಗಲಿಗಳು
ಅಂಕೆ ಶಿಕ್ಷೆ ಗಳಿಂದ ಮುಕ್ತರು
ನಾವೇ ಸ್ವತಂತ್ರ ಭಾರತ ಪ್ರಜೆಗಳು
ನೀತಿನಿಯಮಗಳ ತೊರೆದೆವು
ಮನಬಂದೆಡೆ ಮುನ್ನಡೆವೆವು
ನಮಗಿಲ್ಲ ಯಾವುದೇ ಬೇಲಿಯು
ನಾವೇ ಸ್ವತಂತ್ರ ಭಾರತ ಪ್ರಜೆಗಳು
ಸ್ವದೇಶೀ ಮಂತ್ರ ವ ಮರೆತೆವು
ವಿದೇಶೀ ತಂತ್ರವ ಮೆರೆದೆವು
ಸ್ವಾತಂತ್ರ್ಯ ದಮಲಲಿ ತೇಲುತಿಹೆವು
ನಾವೇ ಸ್ವತಂತ್ರ ಭಾರತ ಪ್ರಜೆಗಳು