STORYMIRROR

ಹೃದಯ ಸ್ಪರ್ಶಿ

Drama Tragedy Others

4  

ಹೃದಯ ಸ್ಪರ್ಶಿ

Drama Tragedy Others

ಬದಲಾಗುತ್ತಿರುವ ಕಾಲ

ಬದಲಾಗುತ್ತಿರುವ ಕಾಲ

1 min
235

ಜಾತಿ ಭೇದವಿಲ್ಲ ಇಲ್ಲಿ

ಮೇಳು ಕೀಳುಗಳಿಲ್ಲ

ನಾನು ನೀನು ಒಂದೇ ಎಲ್ಲಾ

ಲಿಂಗ ತಾರತಮ್ಯದ ಮಾತೇ ಇಲ್ಲ


ಅತ್ತಾಗ ಅತ್ತು ನಕ್ಕಾಗ ನಕ್ಕು

ಆಡಿದ ಆಟಗಳ ಪಟ್ಟಿ ಇನ್ನೂ ಉದ್ದವಿದೆ

ಹೇಳಲಾಗದು ಬಾಯಿ ಮಾತಿನಲಿ

ವರ್ಣಿಸಲಾಗದು ಪದಗಳಲಿ


ಕಂಬನಿ ಒರೆಸೋ ಕೈಯಾಗಿ

ಬಿದ್ದವರಿಗೆ ಎದ್ದು ನಿಲ್ಲೋ ಹೆಗಲಾಗಿ

ಎಷ್ಟೊಂದು ಖುಷಿ ಮನದಲಿ..?

ಎಷ್ಟೊಂದು ಹರುಷ ಜೀವನದಲಿ..?


ಧರ್ಮದ ಮಾತೇ ಇಲ್ಲ

ಅಂತೆ ಕಂತೆಗಳ ಹಂಗೇ ಇಲ್ಲ

ಹಾಯಾದ ಜೀವನ ನೆಮ್ಮದಿಯ ಪಯಣ


ಬೆಳಿಗ್ಗೆ ಗುರುಗಳ ಪಾಠ

ಮಧ್ಯಾಹ್ನ ಬಿಸಿ ಬಿಸಿ ಊಟ

ಸಂಜೆ ಗೆಳೆಯರ ಜೊತೆ ಆಟ

ಮುಗಿಯಿತು ದಿನದ ಪರಿಪಾಠ


ಎಷ್ಟೊಂದು ಚಂದವಿತ್ತು ಆ ಕಾಲ?

ಮರೆಯಾಗುತ್ತಿದೆ ಈಗ ಅಂತಸ್ತು,

ಆಡಂಭರದ ಮುಸುಕಿನಲಿ ಮುಗ್ಧತೆ!


Rate this content
Log in

Similar kannada poem from Drama