STORYMIRROR

Surabhi Latha

Drama Romance Others

4  

Surabhi Latha

Drama Romance Others

ಯಾರಿಗಾಗಿ ಈ ರೂಪ

ಯಾರಿಗಾಗಿ ಈ ರೂಪ

1 min
460

ಯಾರಿಗಾಗಿ ಈ ರೂಪ 

ಏತಕಾಗಿ ಪರಿ ತಾಪ 


ಕಪ್ಪು ಇರುಳು ನಂತಿಹ 

ಮುಂಗುರಳ ನೆರಿಗೆಯಲ್ಲಿ 

ನಿನ್ನ ತುಂಟ ಕಣ್ಣು ಕೆಣಕಿದಂತೆ 

ನಾಚಿ ನೀರಾದೆ ನಿನ್ನ ನೆನೆದಂತೆ 


ಶಬರಿಯಂತೆ ಹಾಸಿದೆ 

ಹೂಗಳ ಹಾಸಿಗೆ 

ನಡೆದು ಬರುವ ಹಾದಿಯಲ್ಲಿ 

ಒಲವಿನ ಮಲ್ಲಿಗೆ 


ನೆನಪುಗಳು ಬಾಧಿಸುತಿರಲು 

ನೀ ನನ್ನ ಮರೆತು ಕುಳಿತಿರಲು 

ಕಾಣದೇ ಸೋತಿರಲು ನಯನ 

ನೊಂದು ಹಾಡಿತು ಮನ 


ಯಾರಿಗಾಗಿ ಈ ರೂಪ 

ಏತಕಾಗಿ ಪರಿ ತಾಪ 


ಭಾವನೆಗಳು ಭತ್ತಿ ಹೋಗುವ 

ಮುನ್ನ ಬಳಿ ಬಾರೋ ಚೆನ್ನ 

ಮನಸು ಕದಡುವ ಮುನ್ನ 

ಸೇರಿಸಿಕೋ ಬಳಿ ನನ್ನ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama