ಚಲನಚಿತ್ರ
ಚಲನಚಿತ್ರ
ಕಥೆಯ ಬಣ್ಣಿಸುವ......
ಮಾಧ್ಯಮವಿದು ಚಲನಚಿತ್ರ
ನಮ್ಮ ಕಣ್ಣಂಚಿನಲ್ಲಿ ನಿಂತ ಕಥೆಗೆ
ಹೊಸ ಚಿತ್ರಣವ ಮೂಡಿಸುವ
ಬಣ್ಣದ ಲೋಕವೇ ಚಲನಚಿತ್ರ
ಅದೆಷ್ಟೋ ಜನರ ಬದುಕು
ಬಣ್ಣ ಹಚ್ಚುವ ನೆಪದಲ್ಲಿ ಸಾಗುತ್ತಿದೆ.
ಅದೆಷ್ಟೋ ಜನರ ಕಲೆಗೆ...
ವೇದಿಕೆಯಾಗುತ್ತಿದೆ ಈ ಚಲನಚಿತ್ರ
ಚಿತ್ರಕ್ಕೆ ಯಾವುದೇ ಚಲನೆಗಳಿಲ್ಲ
ಆದರೆ ನಮ್ಮ ಕಣ್ಣದ ದೃಷ್ಟಿಗೆ
ಇಳುಕುವ ದೃಶ್ಯಗಳು ಚಲಿಸುತ್ತಿರುತ್ತವೆ,
ಆದ್ದರಿಂದ ಇದರ ಹೆಸರು ಚಲನ ಚಿತ್ರವೆಂದಿರಬಹುದೇನೋ
ನಾ ಕಾಣೆ...........
ಮನದಲ್ಲಿ ಹೊಸದೊಂದು
ದೃಶ್ಯಗಳ ಸೃಷ್ಟಿಸುತ್ತದೆ.
ವ್ಯಕ್ತಿಗಳ ಬದುಕನ್ನೇ ರೂಪಿಸುತ್ತದೆ.
ನವರಸಗಳು ಮಿಶ್ರಣಗೊಂಡ
ಮಾನವ ಶರೀರಕ್ಕೆ
ಮುದ ನೀಡುತ್ತದೆ ಈ ಚಲನಚಿತ್ರ.