STORYMIRROR

Someshwar Gurumath

Drama Classics Others

4  

Someshwar Gurumath

Drama Classics Others

ಮೌನದಲೇ ಮರೆಯಾಯಿತು

ಮೌನದಲೇ ಮರೆಯಾಯಿತು

1 min
765

ಲೇಖನಿಯಪ್ಪಿದ ಶಾಹಿ,

ಕಾಗದವ ತೊರೆದಂತೆ,

ದುಂಬಿಗಿತ್ತ ಮಕರಂದವ,

ಪುಷ್ಪ ತಾ ಹೀರಿದಂತೆ,

ಇಳೆಯಂಗಳದಿ ಮೆರೆವ ಇಬ್ಬನಿ,

ನಾಚುವುದ ಮರೆತಂತೆ,

ಮನತಣಿಪ ತಂಬೂರಿ,

ತಾಳವನೇ ತಪ್ಪಿದಂತೆ,

ನಿನ್ನರಸಿದ ಮನಕೆ,

ನೆನಪೇ ಹಿಂದಿರುಗಿದಂತೆ,

ಹರಿದ ಪುಟಗಳ ತೆರೆದ ಅಕ್ಷರ,

ಕಣ್ಣೀರ ತೋರಿದಂತೆ,

ಒಡಲಾಳದ ದಾಹಕೆ,

ಸಾಗರದೆಡೆ ಕರೆದಂತೆ,

ಇಂತಿಪ್ಪದೊಂದು ಕಥೆ,

ಸಮಯದಲಿ ಸಾಗಿ,

ಕಲ್ಪನೆಯಾಗಿ ಉಳಿದಂತೆ,

ನಿನ್ನ ನಿನಗೆ ಪರಿಚಯಿಸಲು,

ಸನಿಹದಲೇ ಕಾದ,

ತನುವೆಂಬ ಮೂರ್ತಿಯ 

ಉಸಿರೆಂಬ ತೋರಣ ಕಳಚಿ,

ಭಾವದ ಹನಿಯಾಗಿ,

ಹೃದಯದಿ ಜಾರಿದೆ,

ಕೊನೆಗಿತ್ತ ಅವಕಾಶವ,

ಕಾಲವೇ ತಾ ಕಸಿದಿದೆ,

ಪ್ರಣಯದೂರಿಗೆ ಪಯಣಿಸಿದ,

ಪಯಣಿಗನ ಕಾವ್ಯಗಳಿಗೇನು ಅರಿವಿತ್ತು,

ಮರಳಿ ಬಾರದೂರನು ತಲುಪಿದ,

ಪ್ರತಿಯಕ್ಷರವೂ ಸೋತಿತ್ತು.

ಅಂತೆಯೇ ಸಿಹಿಗನಸಿನ ಸವಿಯಂಬರ,

ಮೌನದಲೇ ಮರೆಯಾಯಿತು.


Rate this content
Log in

Similar kannada poem from Drama