STORYMIRROR

Someshwar Gurumath

Classics Inspirational Others

4  

Someshwar Gurumath

Classics Inspirational Others

ನಿನ್ನಮಡಿಲಿಗೆಧಾರೆಯಗೈದಂತೆ!

ನಿನ್ನಮಡಿಲಿಗೆಧಾರೆಯಗೈದಂತೆ!

1 min
13

ರವಿಯನರಸಿ ಭುವಿತರ್ಪಣಗೈದಂತೆ,

ಇಳೆಯತ್ತಳಗಕೆ ಕಣ್ಣೀರಲಾಗಸ ಮಿಂದಂತೆ,

ಬಡಿತಗಳಂತರಂಗದ ದನಿಯು ಹೃದಯವನಪ್ಪಿ,

ಭಾವಗುಂಜನಗಳೆನ್ನೀಪ್ರಾಣ ನೀನೆಂದಂತೆ!


ಮೌಖಿಕದಿ ನುಡಿಸಂಪದಗಳಲಿಸಾಗಿ,

ಮನದನುಭೂತಿಯು ಪ್ರೇಮದಲಭಿವ್ಯಕ್ತಿಯಾಗಿ,

ಪುನರುತ್ಥಾನಗೈಪ ವಸಂತವೆನ್ನಿ ಆಯತಿಯಸೋಕಿ,

ಮೌನರಾಗದಪದಕೋಶಸೃಷ್ಟಿಸಿ ನಿನಗರ್ಪಿಸಿದಂತೆ!


ಕಳೆವಕಾಲವೂ ಕಳೆದಪುಟಗಳ ಕಾಯದು,

ಕವಿತೆಗಳಲಿ ಕೂತ ಕವಿಯ ಕಾರ್ಪಣ್ಯವು,

ಬಾಳಕೈಗಂಟಿನ ಕೈಪಿಡಿಯಾಗಿ ನಿತ್ಯವೂ ಕರಗಿರಲು,

ಎನ್ನುಸಿರ ದೋಣಿಗೆ ಕೈವಲ್ಯದೊಡತಿಯಾಗಿ ನೀಬಂದಂತೆ!


ಅನುದಿನವೂಸ್ಮರಿಸಿ ಅನುಗಾಲವೂ ಜೊತೆಯಾಗಿ,

ಅನುಭಾವದಿ ಬೆಸೆದಿಪ ಅನುಬಂಧವ,

ಅಂತರ್ಮುಖದ ಕವಲುಗಳಲಿ ಸಂಗ್ರಹಿಸಿ,

ದೈವಾನುಗತವಾಗಿ ನಿನ್ನಮಡಿಲಿಗೆಧಾರೆಯಗೈದಂತೆ!


Rate this content
Log in

Similar kannada poem from Classics