STORYMIRROR

Someshwar Gurumath

Classics Inspirational Others

4  

Someshwar Gurumath

Classics Inspirational Others

ಸಾಗಿಹೆಯೇಕೆ ಬಲುದೂರ ತೊರೆದು?

ಸಾಗಿಹೆಯೇಕೆ ಬಲುದೂರ ತೊರೆದು?

1 min
389

ಆರಂಭಿತ ರೇಖಾರಶ್ಮಿಯ,

ಅನಾರಂಭಿತ ಪಥದಾಯ್ಕೆ,

ಅನುವಾದಿಪ ಭಾವಗಳನಾದುವಾದಿಪ,

ಅನುಭಾವಗಳ ಕೋರಿದಂತೆ.

ಮುನ್ನಡೆದ ಹೆಜ್ಜೆಗಳ,

ನೆರಳ ಗುರುತು ಮರಳಿ,

ಕ್ಷಣಕಾಲ ಕಥೆಗೆ ತೆರಳಿ,

ನಿನ್ನಾಗಮನಕೆ ಕಾದಂತೆ.

ಕರಸೋಕಿ ಜಾರಿಹ,

ಕಡುಗಂಬನಿಗೆ ಕೊರಗಲೇಕೆ?

ಕಡಲಂಚಿನಲಿ ಮರೆಯಾದ,

ಕಡೆಯ ಹನಿಗೆ ಕೊಡೆಯಾದಂತೆ.

ಮಾತಿಗೆ ಮೊದಲಾದ ಯೋಚನೆ,

ರಾಗಕೆ ಮೊದಲಾದ ಸ್ವರ,

ತಾಳಕೆ ಮೊದಲಾದ ಸಂಗೀತದಂತೆ,

ಎನ್ನುಸಿರಿಗೆ ಮೊದಲಾಗಿ, ನೀ ಮೌನಿಯಾದಂತೆ.

ತೀಡಿದಂತೆ ಮೂಡುವ ಅಕ್ಷರ,

ಬರೆದಂತೆ ಸಾಗುವ ಬಾಳ ಪುಟಗಳಲಿ,

ಶುರುವಾದ ಕಾವ್ಯಕೆ ಮುನ್ನುಡಿ ಬರೆದು,

ಸಾಗಿಹೆಯೇಕೆ ಬಲುದೂರ ತೊರೆದು?


Rate this content
Log in

Similar kannada poem from Classics