STORYMIRROR

Someshwar Gurumath

Romance Classics Inspirational

4  

Someshwar Gurumath

Romance Classics Inspirational

ಮೇಘ ಬಿರಿದು, ರವಿಗಿರಣ ಹರಿದಂತೆ...

ಮೇಘ ಬಿರಿದು, ರವಿಗಿರಣ ಹರಿದಂತೆ...

1 min
285

ಮೇಘ ಬಿರಿದು,

ರವಿಗಿರಣ ಹರಿದಂತೆ,

ತಿಳಿಬಾನು ಸರಿದು,

ಚಂದಿರನಲಿ ಮಿಂದಂತೆ,

ಮನದಾಳದ ಕರೆಯು,

ಅನುಗಾಲವೂ ಜಪಿಸಿದಂತೆ,

ಅನಂತಶಯನದ ಆರಂಭಕೆ,

ಅನುಭಾವದಲಿ ಮುನ್ನುಡಿ ಬರೆದಂತೆ.


ತುಸು ಬೇಡಿಯೂ,

ತರುಬದ ಕಾಲದೋಟಕೆ,

ಬಿಗಿಹಿಡಿದೆನ್ನ ಉಸಿರ ಬಿಸಿಯ,

ತಡೆಯ ನಾ ಹಾಕಲೇ?

ಎನ್ನಿಂದಾರಂಭಗೊಂಡು,

ಎನ್ನೊಳಗೇ ಎನಗಾಗಿ ಪುಟ್ಟಿ,

ಎನಿತುಪಯಣವಿದೆಂದು ಪ್ರಶ್ನಿಸುತಲಿ,

ಎನ್ನಂತರಂಗದಿಹುದುಗಿದುತ್ತರವ ನಾ ಹುಡುಕಲೇ?


ಮರೆಯಹೊರಟ ಮರದ ನೆರಳು,

ನೆನಪಿನಂಗಳ ತಟ್ಟಿದಂತೆ,

ನಯನಗಳಲರಳಿದ ಹೂ,

ಕಣ್ಣೀರಲಿ ಜಾರಿದಂತೆ.

ಅನನ್ಯಾನುರಾಗವು ಉದಯಿಸಿ,

ಭಾವವಲಯದಿ ಕೋರಿದೆ,

ಪ್ರಾಣದುಸಿರ ತುಂಬಿದ ಪ್ರೇಮಬಡಿತಗಳ,

ಮೃದು ಹೃದಯ ಅನುಕ್ಷಣವೂ ನಿನ್ನೇ ನೆನಪಿಸಿದೆ. 


Rate this content
Log in

Similar kannada poem from Romance