STORYMIRROR

Someshwar Gurumath

Romance Classics Fantasy

4  

Someshwar Gurumath

Romance Classics Fantasy

ಮೃದುಸ್ಪರ್ಶಕೆ ಮುಡಿಪಂತೆ!

ಮೃದುಸ್ಪರ್ಶಕೆ ಮುಡಿಪಂತೆ!

1 min
341

ಅಂತರದಲಿಹ ಮೇದಿನಿಯೊಡೆ,

ಅಂತರಮೀರಿ ಅಂತರ್ಗತವಾದ,

ರವಿಯಾಂತರಾಳದ ಹೃದಯದಂತೆ,

ಕವಿಯಂತರಂಗವೂ ಮಿಡಿವುದಂತೆ.


ಇಳೆಯಸಿಂಗರಿಸಿ ಇಬ್ಬನಿಯು,

ನೇಸರನಿಗೆ ಕಾದಂತೆ,

ಕಬ್ಬಿಗನೊಲವ ಕಾವ್ಯವು,

ಕೇಳುಗರಲಿ ಮೂಡಿದಂತೆ.


ಕಿರುಹೊತ್ತಿಗೆಯಕ್ಷರವು,

ಹೊರುವ ರಾಗವ ಬಯಸಿದಂತೆ,

ಬಿರುಬಿಸಿಲುಮಳೆಗಳ ಸಹಿಸಿದ ಬಂಡೆ,

ಮೂರ್ತಿಯಾಗಲು ಶಿಲ್ಪಿಯನರಸಿದಂತೆ,


ಮೂಲಗಳಲಿ ಮರೆಯಾದ ನದಿ,

ಸಾಗರದೆಡೆ ಸಾಗಿದಂತೆ,

ಮೇಘದಲಿಯಡಗಿದ ಹನಿಯು,

ವರ್ಷಧಾರೆಯಾಗಿ ಜಿನುಗಿದಂತೆ,


ಕಳೆದ ಕಾಲದ ಕಲರವ,

ಸಿರಿಯಹೊತ್ತು ತಂದಂತೆ,

ಎನ್ನೀ ಬಾಳ ಪುಟಗಳು,

ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ. 


Rate this content
Log in

Similar kannada poem from Romance