Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ramamurthy Somanahalli

Romance Classics Others

4  

Ramamurthy Somanahalli

Romance Classics Others

ನೆನಪಿನಾ ನೌಕೆ

ನೆನಪಿನಾ ನೌಕೆ

1 min
252



ಮಧುರ ಮಧುರ ಮಧುರ ಈ ನಿನ್ನ ಅಧರ

ನಯನ ನಯನ ನಯನ ನೋಟವದು ಮಧುರ 

ಸುಡುತಿರೆ ತಂಗಾಳಿ ಬಯಸಿಹೇ ನಿನ್ನ ಸನಿಹ

ಕೊಲ್ಲುತಿರೆ ಕಣ್ಣೋಟ

ಸಹಿಸಲಾರೆನೀ ವಿರಹ...||ಮಧುರಾ||


ಪಯಣಿಗ ನಾನಿನ್ನ ನೆನಪಿನಾ ನೌಕೆಯಲಿ

ಜೊತೆ ಜೊತೆಯಲಿ ಸಾಗುವ ಬಾಳ ಬಂಡಿಯಲಿ

ತೇಲುವ ಪ್ರೇಮ ಸಾಗರದಿ ತೆರೆಗಳಾ ನಡುವೆ

ಅಂಬಿಗನಂತೆ ನೀನಿಲ್ಲದಿರೆ ದಡ ಹೇಗೆ ನಾ ಸಾಗುವೆ ||ಮಧುರ||


ಕಾಡುತಿರೆ ನಿನ್ನೀ ಕಂಗಳಾ ನೋಟವದು ಹೂ ಬಾಣ,

ಸಹಿಸೆ ಅಧರಾಮೃತವುಣಿಸಿ ತಣಿಸೆನ್ನ ಈ ಕ್ಷಣ

ಬಾ ನಲ್ಲೆ ಬಳಿ ನೀನೆನ್ನ ವಿರಹಾಗ್ನಿ ದಮಿಸಿ 

ಕೈಬೀಸಿ ಕರೆದಿಹುದೆಮ್ಮ ಕಾನನ

ಹಸಿರು ಹಾಸಿ  

 ||ಮಧುರ||


ತಿಳಿ‌ ಮುಗಿಲ ಮೇಲೇರಿ ಹಾರುವ ಹಕ್ಕಿಯಂತೆ

ಎಂದೆಂದೂ ನಗುತಿರು ನೀ ಬಾನ ಚಂದಿರನಂತೆ

ಸಿಹಿ ಮಾತಿನ ಮುತ್ತಿನಲಿ ನಲಿಯೋಣ ನಾವಿಂದು

ಪ್ರೇಮಸಾಗರದೀಜಾಡಿ ರಚಿಸುವಾ ರಸ ಕಾವ್ಯವಿಂದು ||ಮಧುರ||


Rate this content
Log in

Similar kannada poem from Romance