ರಾಹುಲ್ ಕುವರ
ರಾಹುಲ್ ಕುವರ


ತಾಯಿ ಸೋನಿಯಾರ ಮುದ್ದು ಕುವರ
ಚಪ್ಪನ್ ಐವತ್ತಾರರ ಯುವ ಕುಮಾರ
ಆಗಿಲ್ಲ ಆತನಿಗಿನ್ನೂ ಸ್ವಯಂವರ
ನುಚ್ಚು ನೂರಾಗಿಹುದಮ್ಮನ ಕನಸಿನ ಗೋಪುರ
ಕುಳಿತಲ್ಲಿ ನಿಂತಲ್ಲಿ ಮೊರೆಹೊಕ್ಕಿಹರು ದೇವರ
ಜಾತಕ ಪಿಡಿದು ಗೋಗರೆವರು ಜೋಯಿಸರ
ಜಪತಪ ಹೋಮಹವನಗಳಿಂದೋಡಿಸಿ ಗ್ರಹಚಾರ
ಮರೆಯಲಾರೆ ಎಂದೆಂದಿಗೂ ನಿಮ್ಮೀ ಉಪಕಾರ
ಕೂಡಿಕಳೆದು ಪರಾಮರ್ಶಿಸಿ ನುಡಿವರು ಜೋಯಿಸರು
ಗ್ರಹಭಾದೆಳಿಲ್ಲ, ನಿನ್ನ ನಂಬಿಕಸ್ಥರೇ ಅಡ್ಡಿಯಾಗಿಹರು
ವಧು ಅನ್ವೇಷಣೆಗೆ ನೇಮಿಸಿಹೆ ದಿಗ್ವಿಜಯ ಶಶಿತರೂರು
ಕನ್ಯೆ ನೋಡಿ ಮನಸೋತು ಮಧುಮಗನಾಗಿ ಮಂಚವೇರಿಹರು.
*ರಾಸೋ*