ಪ್ರೀತಿಯ ನಶೆ
ಪ್ರೀತಿಯ ನಶೆ
ಅತ್ತರಿನ ಮತ್ತಿನಲ್ಲಿ ನಶೆಯೇರಿಸುವಂತಿದೆ
ನಖಾಫ್ ಮರೆಯಲ್ಲಿ ನಗುತ್ತಿರೋ
ಆ ನಿನ್ನ ಕಾಜಲ್ ಕಂಗಳು
ಸೌಜನ್ಯ ಪೂರ್ಣ ಗುಣ ನಡತೆ
ಹೊರಗೆ ಕಾಣಿಸದ ಆ ನಿನ್ನ ಅಂದ ಚಂದ
ನನ್ನ ಮನಸೂರೆಗೊಳ್ಳುತಿದೆ
ಹರಿದ ಹಾಳೆಯಲೂ...
ನಿನ್ನ ನೆನೆದು ನಾ ಗೀಚಿದ ಪದಗಳು ಸಾಸಿರ
ನೀ ನನ್ನ ಬಾಳ ಪೂರ್ಣ ಚಂದಿರ..

