ನಿನ್ನ ನೆನಪಿನಲ್ಲಿ ಬದುಕು ಸಾಗಿದೆ !
ನಿನ್ನ ನೆನಪಿನಲ್ಲಿ ಬದುಕು ಸಾಗಿದೆ !
ಕೋರಿಕೆಯ ಮೇರೆಗೆ ನಿನ್ನನು ಮರೆಯುವ ಸಲುವಾಗಿ.
ದಿನವೆಲ್ಲ ಹಳೆಯ ನೆನಪುಗಳ ಸುಡಲು ಆಣೆ ಮಾಡಿದೆ!
ನೆನಪುಗಳ ರಾಶಿಯಲಿ ನೀನಾಡಿದ ಮಾತು ಮತ್ತೆ ಮತ್ತೆ ನೆನಪಾಗಿ...
ಕಣ್ಣ ಹನಿಗಳು ನಿನ್ನ ನೆನಪುಗಳೆಲ್ಲವ ನೆನಸಿದೆ .
ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು!
ಮರಳಲ್ಲಿ ಬರೆದ ನೆನಪಲ್ಲ ನೀನು, ಅಳಿಸಿ ಬಿಡಲು ನಿನ್ನಾ
ಎದೆಯಾಳದಲ್ಲಿ ತುಂಬಿಟ್ಟ ಪ್ರೀತಿ ನೀನು!
ನಿನ್ನ ನೆನಪುಗಳೇ ಬದುಕು ನನಗೆ !