ಹಸಿವು!?
ಹಸಿವು!?
ಹಸಿವೇ ಶಾಪವದು, ಹಸಿವೇ ವರವದೆಂದರುಹಿದರು
ಹಸಿದವಗೆಂದೂ ಹಿತೋಪದೇಶ ಸಲ್ಲದೆಂದರು
ಹಸಿವಿಲ್ಲದವಗೆಂದೂ ರುಚಿಸದನ್ನ ನೀಡದಿರೆಂದರು
ದಾನ ಧರ್ಮದ ಹಸಿವು
ದಯೆಯ ಮೂಲವೆಂದರು
ಆಸೆಯ ಹಸಿವು ದು:ಖದಾ ಮೂಲವೆಂದ ಬುದ್ಧ
ಜ್ಞಾನದಾ ಹಸಿವೇ ಜೀವನವೆಂದ ವಿವೇಕಾನಂದ
ಹಸಿವು ಇತಿಮಿತಿಯಲಿರೆ ನಮ್ಮೀ ಬದುಕು ಚೆಂದ
ತೊರೆ ಮಹದಾಸೆಯ ಹಸಿವು ಪಡೆವೆ ಸದಾನಂದ
ಹಸಿವು ಮುಕ್ತವಾಗಲಿ ಈ ಮೋಹದಾ ಕಾಯ,
ಸತ್ಯದಾ ಹಸಿವು ತೋರುವುದು ನಿಜದಾರಿಯ
ಭಕ್ತಿಯ ಹಸಿವು ಹೆಚ್ಚಾಗಿ ನೆನೆಯಲಿ ಹರಿಯ
ಅರಿಷಡ್ವರ್ಗ ತೊರೆದುಬಿಡು ಅರಸಿ ಮುಕ್ತಿಯ